ವೇಣೂರು: ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಯಾಗಿರುವ ಮಹತ್ವಕ್ಷಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಭವಿಷ್ಯದ ಉತ್ತಮ ಕಾರ್ಯಕ್ರಮವಾಗಿದ್ದು, ಜನರಿಗೆ ಶುದ್ಧ ಕುಡಿಯವ ನೀರು ಲಭಿಸುವಂತೆ ಮಾಡುವಲ್ಲಿ ಪಂಚಾತ್ ಸಿಬ್ಬಂದಿಗಳು, ತಳಮಟ್ಟದ ಕಾರ್ಯಕರ್ತರಿಗೊಂದು ಸೇವೆಯ ಅವಕಾಶವೆಂದು ತಿಳಿದು ಕಾರ್ಯಪ್ರವೃತರಾಗಬೇಕಾಗಿದೆ ಎಂದು ಅರಂಬೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಹೇಳಿದರು.
ಅವರಿಂದು ದ.ಕ ಜಿಲ್ಲಾ ಪಂಚಾಯತ್,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು,ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ಜೆಜೆಎಮ್ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸಮುದಾಯದ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಕ್ಷೇತ್ರ ಮಟ್ಟದ ಕಾರ್ಯಕರ್ತರಿಗೆ ವೇಣೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಮಾತನಾಡಿದರು.
ವಿವಿಧ ಪ್ರದೇಶಗಳಿಗೆ ಹೋಲಿಸಿದಲ್ಲಿ ಕರಾವಳಿ ಭಾಗದ ನಾವುಗಳು ಜಲಸಂಪನ್ಮೂಲವನ್ನು ಹೆಚ್ಚಾಗಿ ಹೊಂದಿದ್ದೇವೆ ಮುಂದಿನ ತಲೆಮಾರಿಗೂ ಅಂತರ್ಜಲವನ್ನು ಉಳಿಸುವ ಕಾರ್ಯ ನಮ್ಮಿಂದ ಆಗಬೇಕಿದೆ. ಯಾರು ಕೂಡ ಶುದ್ದ ಕುಡಿಯುವ ನೀರಿನಿಂದ ವಂಚಿತರಾಗಬಾರದು ಎಂಬುದು ಜಲಜೀವನ್ ಮಿಷನ್ನಿನ ಮುಖ್ಯ ದ್ಯೇಯೋದ್ದೇಶವಾಗಿದೆ.ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಕ್ಷೇತ್ರ ಮಟ್ಟದ ಕಾರ್ಯಕರ್ತರ ಪಾತ್ರ ಬಹುಮುಖ್ಯ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಗಾರವನ್ನು ವೇಣೂರು ಪಂಚಾಯತಿನ ಉಪದ್ಯಾಕ್ಷರಾದ ಆರುಣ್ ಕ್ರಾಸ್ತ ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಲ್ಯಾಬ್ ನ ಜೂನಿಯರ್ ಕೆಮೆಸ್ಟ್ರೀ ಆದಿತ್ಯ ರಾವ್ ರವರು ಪರೀಕ್ಷಾ ವಿಧಾನದ ಕುರಿತು ಮಾಹಿತಿ ನೀಡಿದರು. ಬಳಿಕ ಜಲಜೀವನ್ ಮಿಷನ್ನ ಜಿಲ್ಲಾ ಐಇಸಿ/ಹೆಚ್.ಆರ್ಡಿ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಜಲಜೀವನ್ ಮಿಷನ್ ಇದರ ಉದ್ದೇಶ ಮತ್ತು ಅಗತ್ಯದ ಕುರಿತು ಸಮಗ್ರ ಮಾಹಿತಿ ನೀಡಿದರು. ಎಸ್ ಡಿ ಯಂ ಐಟಿಐಯ ಪಿಟರ್ ಜೋಸೆಪ್ ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲಾ ಜಲಜೀವನ್ ಮಿಷನ್ನ ಹೆಚ್.ಆರ್.ಡಿ ಚರಣ್ ರಾಜ್ ಅವರು ತಮ್ಮ ತಮ್ಮ ಚಟುವಟಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಸುತ್ತಲಿನ 12 ಗ್ರಾಮ ಪಂಚಾಯತು ವ್ಯಾಪ್ತಿಯ ಒಟ್ಟು 60 ಜನರು ಮತ್ತು ಪಿಡಿಒ ಗಳು, ವೇಣೂರು ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು