
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಆಗಮಿಸುತ್ತಿರುವ ಬ್ರಹ್ಮರಥ ಹಾಗೂ ಪುಷ್ಪರಥಗಳು ಗುರುವಾಯನಕೆರೆ ಶಕ್ತಿನಗರ ಮೂಲಕ ಸಾಗಿ ಬರುತಿದ್ದು ಈ ವೇಳೆ ನವಶಕ್ತಿ ಮನೆಯವರು ರಥಗಳನ್ನು ಭಕ್ತಿಯಂದ ಬರಮಾಡಿಕೊಂಡರು, ನವಶಕ್ತಿ ಮನೆಯ ರಾಜೇಶ್ ಶೆಟ್ಟಿ ಹಾಗೂ ಸುಚಿತ ದಂಪತಿಗಳು ಭಕ್ತಿಪೂರ್ವಕವಾಗಿ ಅರತಿ ಬೆಳಗಿ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ರಾಜಗೋಪುರ ನಿರ್ಮಾಣ ಸಮಿತಿಯ ಅಧ್ಯಕ್ಷರು ಹಾಗೂ ಬ್ರಹ್ಮಕಲಶೋತ್ಸವ ಸಮಿರಿಯ ಕಾರ್ಯಧ್ಯಕ್ಷರಾದ ಶಶಿದರ್ ಶೆಟ್ಟಿಯವರು, ಜನಾರ್ದನ ದೇವರಿಗೆ ಸಮರ್ಪಣೆಗೊಳ್ಳಲು ತೆರಳುತ್ತಿರುವ ರಥಗಳು ನಮ್ಮ ಮನೆ ಬಳಿ ಸಾಗಿ ಬರುತ್ತಿರುವುದು ಸಾಕ್ಷತ್ ಜನಾರ್ದನ ಹಾಗೂ ಮಂಜುಳೇಶ ದೇವರು ನಮ್ಮ ಮನೆಗೆ ಬಂದಂತಾಗಿದೆ. ಇದಕ್ಕಿಂತ ದೊಡ್ಡ ಯೋಗ ಭಾಗ್ಯ ಏನಿದೆ . ಕೋಟಿ ದುಡ್ಡಿದ್ದರೂ ಇದೆಲ್ಲ ಸಾಧ್ಯವಿಲ್ಲ ಇದೆಲ್ಲ ದೈವಸಂಕಲ್ಪ ಇದಕ್ಕೆಲ್ಲ ಕಾರಣ ನಮ್ಮ ತಾಯಿ ಮಾಡಿರುವ ಪುಣ್ಯದ ಫಲ ಎಂದರು.ಪೂಜೆಯ ಬಳಿಕ ರಥಗಳನ್ನು ಮೆರವಣಿಗೆಯ ಮೂಲಕ ಉಜಿರೆ ಜನಾರ್ದನ ದೇವರ ಸನ್ನಿಧಾನಕ್ಕೆ ಕೊಂಡುಹೋಗಲಾಗುತಿದ್ದು,.ಶಾಸಕ ಹರೀಶ್ ಪೂಂಜ, ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.