ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳುವುದರಿಂದ ಅಧಿಕ ಲಾಭ: ಪ್ರಗತಿಪರ ಕೃಷಿಕ ವೀರಪ್ಪ ಸಾಲ್ಯಾನ್ ಬಂಗಾಲಯಿ ಹೇಳಿಕೆ‌

ಕಣಿಯೂರು: ಕೃಷಿಯಲ್ಲಿ ಹಳೆಯ ಪದ್ದತಿಯ ಬದಲಿಗೆ ಹೊಸದಾದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳುವುದರಿಂದ ಅಧಿಕ ಇಳುವರಿ ಜೊತೆಗೆ ಲಾಭ ಗಳಿಸಬಹುದು. ಸೂರ್ಯನ ಬಿಸಿಲು ಬೀಳುವ ಪ್ರದೇಶದಲ್ಲಿ ಗಿಡಗಳನ್ನು ನೆಡಬೇಕು. ತೆಂಗು, ಅಡಿಕೆಯ ಎಲೆ ಬಾಗುವ ರೋಗಕ್ಕೆ ಸಾಸಿವೆ, ಬೆಳ್ಳುಳ್ಳಿ ದ್ರಾವಣ ನೀಡಬಹುದು ಎಂದು‌ ಪ್ರಗತಿಪರ ಕೃಷಿಕ ವೀರಪ್ಪ ಸಾಲ್ಯಾನ್ ಬಂಗಾಲಯಿ ಹೇಳಿದರು. ಅವರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ಕಣಿಯೂರು ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕೃಷಿಯಲ್ಲಿ ಕಸಿ’ ವಿಚಾರದ ಕುರಿತು ಮಾತನಾಡಿದರು.

ಮಾವಿನ ಗಿಡ ಹಾಗೂ ಗುಲಾಬಿ ಗಿಡ ಕಸಿ ಕಟ್ಟುವುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಪರಿಸರವಾದಿ ದುರ್ಗಾಸಿಂಗ್ ರಜಪೂತ್ ಮತ್ತು ಗಿರೀಶ್ ವಿಟ್ಲ ಇವರು ಸಾವಯವ ಕೃಷಿ ಕುರಿತು ಮಾಹಿತಿ ನೀಡಿದರು. ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ಕಣಿಯೂರಿನ ಅಧ್ಯಕ್ಷ ಉಮೇಶ್ ಪಿಲಿಗೂಡು ಅಧ್ಯಕ್ಷತೆ ವಹಿಸಿದ್ದರು. ಕುಲಾಲ ಯುವವೇದಿಕೆ ಅಧ್ಯಕ್ಷ ಬಾಲಕೃಷ್ಣ ಹೆಚ್., ಕೃಷಿಕರಾದ ಸುಭಾಸ್ ಕೆ. ಎನ್. ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎನ್. ಸ್ವಾಗತಿಸಿದರು. ಮಮಿತ ಸುಧೀರ್ ವಂದಿಸಿದರು. ಜಯಕಾಂತ್ ಪೋಯ್ಯಾಲೆ ನಿರೂಪಿಸಿದರು.

error: Content is protected !!