ನೆಲ್ಯಾಡಿ: ಬೆಂಕಿಹಚ್ಚಿಕೊಂಡು ಯುವತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲ್ಯಾಡಿ ಬಳಿ ನಡೆದಿದೆ.
ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ ಎಂಬವರ ಪುತ್ರಿ ನವ್ಯಾ ಜೋಸೆಫ್ (21ವ.) ಆತ್ಮಹತ್ಯೆ ಮಾಡಿಕೊಂಡವರು. ಜ.3ರಂದು ರಾತ್ರಿ ಸುಮಾರು 10:30ರ ವೇಳೆಗೆ ತನ್ನ ಕೊಠಡಿಗೆ ತೆರಳಿದ್ದರು, ಬಳಿಕ ಜ.4ರಂದು ಬೆಳಗ್ಗೆ 8 ಗಂಟೆವರೆಗೂ ಕೋಣೆಯ ಬಾಗಿಲು ತೆರೆಯದೇ ಇದ್ದ ಹಿನ್ನೆಲೆ ಮನೆಯವರು ನವ್ಯಾ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಲಿಲ್ಲ. ಬಳಿಕ ಅನುಮಾನಗೊಂಡು ಬಾಗಿಲು ಮುರಿದು ಒಳಪ್ರವೇಶಿಸಿದ ಸಂದರ್ಭ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ನವ್ಯಾ ಅವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮುಗಿಸಿ, ಮನೆಯಲ್ಲಿದ್ದರು. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.