ಗುಡುಗು ಸಹಿತ ಗಾಳಿ ಮಳೆಗೆ ಕೃಷಿಕರು ಕಂಗಾಲು: ಒಣ ಅಡಕೆ ರಕ್ಷಿಸಲು ಹರಸಾಹಸ

 

ಬೆಳ್ತಂಗಡಿ: ತಾಲೂಕಿನ ಹಲವೆಡೆ ಅನಿರೀಕ್ಷಿತ ಭಾರಿ ಗಾಳಿ ಮಳೆಯುಂಟಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ.

ಮುಖ್ಯವಾಗಿ ಒಣ ಅಡಕೆ ಅಂಗಳದಲ್ಲಿದ್ದು, ದಿಢೀರ್ ಮಳೆಯಿಂದ ರಕ್ಷಿಸಲು ಕೃಷಿಕರು ಹರಸಾಹ ಪಡುವಂತಾಯಿತು. ಕೆಲವರಿಗೆ ರಕ್ಷಿಸಲು ಸಾಧ್ಯವಾಗದೆ ತೊಂದರೆ ಉಂಟಾಗಿದೆ. ಇನ್ನು ತರಕಾರಿ ಬೆಳೆಗಾರರಿಗೂ ಸಮಸ್ಯೆ ಉಂಟಾಗಿದೆ. ಇತರ ಫಲವಸ್ತುಗಳನ್ನು ಬೆಳೆಯುವವರಿಗೂ ಸಮಸ್ಯೆ ಉಂಟಾಗಿದೆ.

ಶಿಶಿಲ, ಅರಸಿನಮಕ್ಕಿ ಸಂಜೆ ಬೇಗನೆ ಭಾರೀ ಮಳೆಯಾಗಿದೆ. ಬಳಿಕ ತಾಲೂಕಿನ ಇತರ ಭಾಗಗಳಲ್ಲಿಯೂ ಗಾಳಿ ಮಳೆ ಸುರಿಯುತ್ತಿದೆ. ತಾಲೂಕು ಕೇಂದ್ರ ಬೆಳ್ತಂಗಡಿ, ಉಜಿರೆ, ಗೇರುಕಟ್ಟೆ, ಪಜಿರಡ್ಕ, ಗುರಿಪಳ್ಳ ಮೊದಲಾಗಿ ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದಿದೆ.

ಕೋಲ, ನೇಮ, ಮದುವೆ‌ ಮೊದಲಾದ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.

error: Content is protected !!