ಉಜಿರೆ ದೇಶ ವಿರೋಧಿ ಘೋಷಣೆ ಪ್ರಕರಣ: ವಿಡಿಯೋ ತಿರುಚಿದ ಆರೋಪದಲ್ಲಿ ಖಾಸಗಿ ವೆಬ್ ನ್ಯೂಸ್ ಚಾನಲ್ ವಿರುದ್ದ ದೂರು: ಕ್ರಮ ಕೈಗೊಳ್ಳುವಂತೆ ಬಿ.ಜೆ.ಪಿ. ಯುವ ಮೋರ್ಚಾದಿಂದ ಕೇಸ್, ಎಸ್.ಡಿ.ಪಿ.ಐ.ನಿಂದಲೂ ಪ್ರತಿದೂರು

ಬೆಳ್ತಂಗಡಿ: ಉಜಿರೆ ಮತ ಎಣಿಕೆ ಕೇಂದ್ರದ ಬಳಿ ಎಸ್.ಡಿ.ಪಿ.ಐ. ಕಾರ್ಯಕರ್ತರ ಸಂಭ್ರಮಾಚರಣೆ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದ್ದು, ಆರೋಪಿಗಳ ಪತ್ತೆಗೆ ತನಿಖೆ‌ ನಡೆಯುತ್ತಿದೆ. ಆದರೆ ಪ್ರಕರಣ ಸಂಬಂಧ ವಿಡಿಯೋವನ್ನು ತಿರುಚಿ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಖಾಸಗಿ ವೆಬ್ ನ್ಯೂಸ್ ಚಾನಲ್ ವಿರುದ್ಧ ಬೆಳ್ತಂಗಡಿ ಬಿಜೆಪಿ ಯುವ ಮೊರ್ಚಾ ವತಿಯಿಂದ ದೂರು ದಾಖಲಿಸಲಾಗಿದೆ.

ಡಿ‌. 30ರಂದು ಮತ ಎಣಿಕೆ ನಡೆದಿದ್ದು, ದೇಶ ವಿರೋಧಿ ಘೋಷಣೆ ಕೂಗಿದ ವಿಡಿಯೋ ಕುರಿತು ವಿವಿಧ ಸಂಘಟನೆಗಳು ದೂರು ದಾಖಲಿಸಲಾಗಿತ್ತು. ನೈಜ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಘಟನೆ ನಡೆದು‌ ಕೆಲ ದಿನಗಳ ಬಳಿಕ ಖಾಸಗಿ‌ ವೆಬ್ ಚಾನಲ್ ಒಂದು, ವಿಡಿಯೋ ತಿರುಚಿ ಸುದ್ದಿ ಪ್ರಸಾರ ಮಾಡುವ ಮೂಲಕ ಸಮಾಜಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವಕನಿಂದ ದೂರು:
ಉಜಿರೆ ಘಟನೆಗೆ ಸಂಬಂಧಿಸದಿದ್ದರೂ‌ ತನ್ನ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಫೋಟೋ ಹರಿಯಬಿಡಲಾಗಿದೆ ಎಂದು ಆರೋಪಿಸಿ ಮತ್ತೊಂದು ದೂರು ದಾಖಲಿಸಲಾಗಿದೆ. ಈ ಕುರಿತು ಫೋಟೋದಲ್ಲಿರುವ ಯುವಕ ದೂರು ದಾಖಲಿಸಿದ್ದು, ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಾಕ್ ಪರ ಹಿಂದೂ ಕಾರ್ಯಕರ್ತರೇ ಘೋಷಣೆ ಕೂಗಿದ್ದು ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ಬೆಳ್ತಂಗಡಿ ಠಾಣೆಗೆ ಪ್ರತಿದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!