ಗ್ರಾಮ ಅಭಿವೃದ್ಧಿಯ ಕಲ್ಪನೆಯ ಯೋಜನೆಗಳಿಗೆ ಜನಬೆಂಬಲ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕಿನ ಇತಿಹಾಸದಲ್ಲಿಯೇ ಎರಡು ವರ್ಷಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಆದ ಅಭಿವೃದ್ಧಿಯನ್ನು ಮೆಚ್ಚಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನವರ ಗ್ರಾಮದ ಅಭಿವೃದ್ಧಿಯ ಕಲ್ಪನೆಯ ಯೋಜನೆಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ರವರ ಸಂಘಟನಾತ್ಮಕ ಶಕ್ತಿ ಮತ್ತು ತಾಲೂಕು ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್‌ರವರ ಸಂಘಟನಾತ್ಮಕ ಬಲ, ಬೂತ್‌ಮಟ್ಟದ ಕಾರ್ಯಕರ್ತರ ಶ್ರಮದಿಂದ ತಾಲೂಕು ಮತದಾರರು ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ, ಇದರೊಂದಿಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯೇ ಮೂಲಮಂತ್ರ ಎಂಬ ನನ್ನ ಚಿಂತನೆಗೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಎಸ್‌ಡಿಪಿಐ ಇಂದು ದೇಶದ್ರೋಹಿ ಘೋಷಣೆ ಮಾಡುವ ಮೂಲಕ ಭಾರತಾಂಬೆಗೆ ಅವಮಾನ ಮಾಡಿದ್ದಾರೆ. ಇದು ತಾಯಿಗೆ ಮಾಡಿದ ದ್ರೋಹದಂತೆ ಈ ದೇಶದಲ್ಲಿ ನೆಲೆಸಿ ಈ ಮಣ್ಣಿನಲ್ಲಿ ಬೆಳೆದು ಇಂತಹ ಘೋಷಣೆ ಮಾಡುವವರಿಗೆ ಇಲ್ಲಿ ನೆಲೆಸಲು ಯೋಗ್ಯತೆ ಇಲ್ಲ ಎಂದು ಘೋಷಣೆ ಮಾಡುವ ಮೂಲಕ ಅವರೇ ತೀರ್ಮಾನಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಇಂತಹವರನ್ನು ಪೋಲೀಸ್ ಇಲಾಖೆ ತಕ್ಷಣ ಬಂಧಿಸಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಭಾರತೀಯ ಜನತಾಪಾರ್ಟಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭೂತಪೂರ್ವ ಜಯವಾಗುತ್ತಿದ್ದು ಇದು ಪ್ರಧಾನಿ ನರೇಂದ್ರ ಮೋದಿಯವರ ಗ್ರಾ.ಪಂ. ಅಭಿವೃದ್ಧಿಯ ಚಿಂತನೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯವೈಖರಿಯೇ ಕಾರಣವಾಗಿದೆ. ಸಮಾಜದ ಕಟ್ಟಕಡೆಯ ಜನಸಾಮಾನ್ಯರ ಕಟ್ಟಕಡೆಯ ಜನರ ಅಭಿವೃದ್ಧಿಯ ಚಿಂತನೆ ಇವರದ್ದಾದರೆ ಶಾಸಕ ಹರೀಶ್ ಪೂಂಜಾ ಅವರ ಪ್ರತೀ ಬೂತ್‌ಮಟ್ಟದ ಅಭಿವೃದ್ಧಿಯ ಸೇವೆಗೆ ಜನ ನೀಡಿದ ಆಶಿರ್ವಾದ ಎಂದು ಹೇಳಿದ್ದಾರೆ.

ಚುನಾವಣಾ ಮತ ಎಣಿಕೆಯಾದ ಸಂದರ್ಭದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದಿರುವುದು ಅವರ ಮನಃಸ್ಥಿತಿಯನ್ನು ಹೇಳುತ್ತದೆ. ಕಾಂಗ್ರೇಸ್ ತುಷ್ಠೀಕರಣ ರಾಜಕೀಯಕ್ಕಾಗಿ ಇವರೊಂದಿಗೆ ಸೇರಿ ದೇಶವನ್ನು ವಿಭಜನೆ ಮಾಡಲು ಹೊರಟಿದೆ. ಸಾರ್ವಜನಿಕರ ಮುಂದೆ ನಮ್ಮ ದೇಶದ ಅನ್ನವನ್ನು ತಿಂದು ನಮ್ಮದ ದೇಶದಲ್ಲಿ ಇದ್ದು ಇಂತಹ ದೇಶದ್ರೋಹ ಚಟುವಟಿಕೆ ನಡೆಸಿರುವುದು ಖಂಡನೀಯ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ದೇಶವನ್ನು ಶಾಂತಿ, ನೆಮ್ಮದಿಯ ತಾಣವಾಗಿಸಬೇಕು ಎಂದು ಒತ್ತಾಯಿಸಿದರು.

error: Content is protected !!