ಗ್ರಾಮ ಪಂಚಾಯತ್ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ: ಡಾ. ಹೆಗ್ಗಡೆಯವರು ಸೇರಿದಂತೆ ಗಣ್ಯರಿಂದ ಮತ ಚಲಾವಣೆ: ಸರತಿ ಸಾಲಿನಲ್ಲಿ ‌ನಿಂತು ಮತದಾನ ಮಾಡಿದ ಶಾಸಕರು, ವಿಧಾನ ಪರಿಷತ್ ಸದಸ್ಯರು: 11 ಗಂಟೆವರೆಗೆ ಶೇ. 33.57 ಮತದಾನ

ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಎಲ್ಲೆಡೆ ಶಾಂತಿಯುತ ಮತದಾನ ನಡೆಯುತ್ತಿದ್ದು, 11 ಗಂಟೆ ಸುಮಾರಿಗೆ ತಾಲೂಕಿನಲ್ಲಿ ಶೇ. 33.57ರಷ್ಟು ಮತದಾನ ನಡೆದಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ ಚಲಾಯಿಸಿದರು. ಹೇಮಾವತಿ ವೀ. ಹೆಗ್ಗಡೆ, ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ಜತೆಗಿದ್ದು ಮತ ಚಲಾಯಿಸಿದರು.


ಶಾಸಕ ಹರೀಶ್ ಪೂಂಜ ತನ್ನ ಹುಟ್ಟೂರಾದ ಗರ್ಡಾಡಿಯ ಪ್ರಾಥಮಿಕ ಶಾಲೆಯಲ್ಲಿ, ತಂದೆ ಮುತ್ತಣ್ಣ ಶೆಟ್ಟಿ, ಪತ್ನಿ ಡಾ. ಸ್ವೀಕೃತ ಜತೆ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.


ನಡ ಗ್ರಾಮದ ಪೆರ್ಮಾಣು ಸರಕಾರಿ ಹಿ. ಪ್ರಾಥಮಿಕ ಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪತ್ನಿ ನಮಿತಾ, ಪುತ್ರ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಅಭಿನಂದನ್ ಜತೆ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದರು.


ಉಜಿರೆ ಎಸ್.ಡಿ.ಎಂ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದ ಕಟ್ಟಡದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ ಚಲಾವಣೆ ಮಾಡಿದರು.


ಡಿ.27ರಂದು ಬೆಳಗ್ಗೆ ಪೋಲಿಂಗ್ ಏಜೆಂಟಗಳ‌‌ ಸಮ್ಮುಖದಲ್ಲಿ ಮತಗಟ್ಟೆ ಅಧಿಕಾರಿಗಳು ಬೆಳಗ್ಗೆ 7 ಗಂಟೆಗೆ ಬ್ಯಾಲೆಟ್ ಪೇಪರ್ ಗಳನ್ನು ತೆರೆದರು‌. ಬಳಿಕ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಬೆಳಗ್ಗೆ 7 ಗಂಟೆಯಿಂದಲೇ ಮತದಾನದಲ್ಲಿ ಮತದಾರರು ‌ಉತ್ಸಾಹದಿಂದ ಭಾಗವಹಿಸಿದ್ದು ಕಂಡುಬಂತು.
46 ಗ್ರಾ.ಪಂ.ಗಳ 624 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 1,432 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

error: Content is protected !!