ಮುಂಡಾಜೆ: ಕಷ್ಟಗಳನ್ನು ಸಹಿಸಿಕೊಂಡು ಸವಾಲುಗಳನ್ನು ಸ್ವೀಕರಿಸಿ ಮುನ್ನಡೆಯುವವನ ಹೆಸರು ಶಾಶ್ವತವಾಗಿರುತ್ತದೆ, ವಿಶ್ವಾಸದ ನಡೆಯಿಂದ ಹಿರಿಯರೊಂದಿಗಿನ ಸಂಬಂಧ ಗಟ್ಟಿಗೊಳ್ಳುತ್ತದೆ ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.
ಅವರು ಭಾನುವಾರ ಕಡಿರುದ್ಯಾವರದ ಆಲಂತಡ್ಕದಲ್ಲಿ ಹಮ್ಮಿಕೊಂಡಿದ್ದ, ಯಕ್ಷಗಾನ ಸಂಯೋಜಕ ವಿನಾಯಕ ಪ್ರಭು ಅವರಿಗೆ ಶ್ರದ್ಧಾಂಜಲಿ ಹಾಗೂ ಯಕ್ಷ-ಗಾನ-ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಮೂರ್ತಿ ಅನಂತರಾಮ ಉಪಾಧ್ಯಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನುಡಿ ನಮನ ಸಲ್ಲಿಸಿದರು.
ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ರಾಘವೇಂದ್ರ ಮಯ್ಯ ಮತ್ತು ಬಳಗದವರಿಂದ ಯಕ್ಷ-ಗಾನ-ನಮನ ಕಾರ್ಯಕ್ರಮ ಜರುಗಿತು.
ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ವಾಸುದೇವರಾವ್, ನ್ಯಾಯವಾದಿ ಸುದರ್ಶನ ರಾವ್ ಗಜಂತೋಡಿ, ಅರ್ಚಕ ಸತ್ಯನಾರಾಯಣ ಹೊಳ್ಳ,ವೆಂಕಟರಮಣ ಭಟ್, ವಿನಯಚಂದ್ರ ಗೌಡ, ಗೋಪಾಲಕೃಷ್ಣ ಗೌಡ ಉಪಸ್ಥಿತರಿದ್ದರು.
ಚಂದ್ರಮೋಹನ ಮರಾಠೆ ಸ್ವಾಗತಿಸಿದರು. ಮುರಳೀಧರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವಿಘ್ನೇಶ್ ಪ್ರಭು ವಂದಿಸಿದರು.