ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಧಮಾಕ: ಯಶ್ ಹುಟ್ಟುಹಬ್ಬದಂದು‌ ಕೆ.ಜಿ.ಎಫ್.2 ಟೀಸರ್ ರಿಲೀಸ್: ಚಿತ್ರತಂಡದಿಂದ ಅಧಿಕೃತ ಘೋಷಣೆ

ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ 2021ರ ಸಂಭ್ರಮ ಇಮ್ಮಡಿಗೊಳ್ಳಲಿದೆ. ಜ.8ರಂದು ಹುಟ್ಟುಹಬ್ಬದ ಸಂಭ್ರಮ ಒಂದೆಡೆ ಅದ್ರೆ, ಮತ್ತೊಂದೆಡೆ ಕೆ.ಜಿ.ಎಫ್.2 ಚಿತ್ರದ ಟೀಸರ್ ರಿಲೀಸ್ ಆಗಲಿದೆ.

ಈ ಬಗ್ಗೆ ಹೊಂಬಾಳೆ ಫಿಲಂಸ್ ನ ಪೇಜ್ ನಲ್ಲಿ ಪೋಸ್ಟ್ ಹಾಕಲಾಗಿದ್ದು, ‘ಎ ಗ್ಲಾನ್ಸ್ ಇಂಟು ದ ಎಂಪರರ್’ ಎಂಬ ಬರಹ ನೀಡಲಾಗಿದೆ. ಈ ಮೂಲಕ ಮುಂದಿನ ಭಾಗದಲ್ಲಿನ ಯಶ್ ಅವರು ಹೇಗಿರಲಿದ್ದಾರೆ ಎಂಬ ಚಿತ್ರಣ ದೊರೆಯಲಿದೆ. ಒಟ್ಟಿನಲ್ಲಿ ‌ಯಶ್ ಅಭಿಮಾನಿಗಳಿಗೆ ಹಬ್ಬವಾಗಲಿದೆ.

ಶೂಟಿಂಗ್‌ ಮುಗಿಸಿದ ಸಂಜಯ್ ದತ್:
ಬಾಲಿವುಡ್ ನಟ ಸಂಜಯ್ ದತ್ ಹಾಗೂ‌ ರಾಕಿಂಗ್ ಸ್ಟಾರ್ ಯಶ್ ನಡುವಿನ ಚಿತ್ರೀಕರಣ ಬಾಕಿ ಉಳಿದಿತ್ತು. ಚಿತ್ರತಂಡ ಇವರ ಭಾಗದ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಮುಗಿಸಿದೆ. ಈ ಮೂಲಕ ‌ಸಂಜಯ್ ದತ್ ಅವರ ಭಾಗದ‌ ಚಿತ್ರೀರಣ ಪೂರ್ಗೊಂಡಿರುವುದಾಗಿ ಚಿತ್ರತಂಡ ಶುಕ್ರವಾರ ಘೋಷಿಸಿಕೊಂಡಿತ್ತು. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟ್ ಹಾಕಿದ್ದರು.

error: Content is protected !!