ಅಪಹರಣ ‌ಘಟನೆಯ ಸಂಕ್ಷಿಪ್ತ ವಿವರ: ಆರೋಪಿಗಳ ಪತ್ತೆಗೆ ಪೊಲೀಸರ ಕಾರ್ಯತಂತ್ರ: ಅಪಹರಣದಿಂದ ಮಗು ಪತ್ತೆಯವರೆಗೆ ಮಾಹಿತಿ: ಪೊಲೀಸರ ನಡೆಗೆ ಸಾರ್ವಜನಿಕರ ಮೆಚ್ಚುಗೆ

 

ಬೆಳ್ತಂಗಡಿ: ಉಜಿರೆಯ ಬಾಲಕ ಅನುಭವ್ ಅಪಹರಣಗೊಂಡಿದ್ದು, ಸುರಕ್ಷಿತವಾಗಿದ್ದಾನೆ. ಅಪಹರಣ ನಡೆದ ಘಟನೆಯ‌ ಬಳಿಕ ಬಾಲಕ ದೊರೆತ ಕ್ಷಣದ ವರೆಗಿನ ಮಾಹಿತಿ ಇಲ್ಲಿದೆ.

ಅಪಹರಣ:
ಡಿ.17 ಸಂಜೆ 6.30ರ ಸುಮಾರಿಗೆ ಉಜಿರೆಯಿಂದ ಅನುಭವ್ ಅಪಹರಣ. ಬಾಲಕನ ಪತ್ತೆಗಾಗಿ ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ನಾಕ ಬಂಧಿ. ಡಿ.ವೈ.ಎಸ್.ಪಿ., ಬೆಳ್ತಂಗಡಿ ವೃತ್ತ ನಿರೀಕ್ಷರು ಸೇರಿ ಅಧಿಕಾರಿಗಳಿಂದ ತನಿಖೆ ಆರಂಭ.

17 ಕೋ. ರೂ. ಬೇಡಿಕೆ:
ಸಾಮಾಜಿಕ ಜಾಲತಾಣ ಮೂಲಕ ಬಿಟ್ ಕಾಯಿನ್ ರೂಪದಲ್ಲಿ 17 ಕೋಟಿ ನೀಡುವಂತೆ ಅಪಹರಿಸಿದವರ ಬೇಡಿಕೆ. ಕೊಂಚ ಹೊತ್ತಿನ ಬಳಿಕ 10 ಕೋಟಿ ನೀಡುವಂತೆ ಬೇಡಿಕೆ.

ತನಿಖೆ ಚುರುಕು:
ಡಿ.18ರಂದು ಬೆಳಗ್ಗೆ ‌ದ.ಕ.‌ಎಸ್.ಪಿ. ಲಕ್ಷ್ಮೀ‌ ಪ್ರಸಾದ್ ಅಪಹರಣಗೊಂಡ ಬಾಲಕನ ಮನೆಗೆ ಭೇಟಿ. 5 ವಿಶೇಷ ತಂಡ ರಚಿಸಿ ತನಿಖೆಯಲ್ಲಿ‌ ಚುರುಕು. ವಿವಿಧ ಆಯಾಮಗಳಲ್ಲಿ ತನಿಖೆ.‌

ಕೂರ್ನಹಳ್ಳಿಯಲ್ಲಿ ಬಾಲಕನ ರಕ್ಷಣೆ:
ಡಿ.18ರಂದು ರಾತ್ರಿ ಕೋಲಾರದ ಮಾಲೂರು ತಾಲೂಕಿನಲ್ಲಿ ತಾಲೂಕಿನ ಕೂರ್ನಹಳ್ಳಿಯಲ್ಲಿ ಬಾಲಕ ಅನುಭವ್ (8) ರಕ್ಷಣೆ.
ಶುಕ್ರವಾರ ರಾತ್ರಿ ಬಾಲಕ ಅನುಭವ್ ನನ್ನು ರಕ್ಷಿಸಿದ ಪೊಲೀಸರು.

ಮೊಬೈಲ್ ‌ಕರೆ ಆಧರಿಸಿ ಕಾರ್ಯಾಚರಣೆ:
ಘಟನೆ ಸಂಬಂಧ ನಾಲ್ಕು ಮಂದಿ ಅಪಹರಣಕಾರರನ್ನು ಬಂಧಿಸಿದ ಪೊಲೀಸರು. ಕೂರ್ನಹಳ್ಳಿಯ ಮಂಜುನಾಥ ಮತ್ತು ಮಹೇಶ ಅವರ ಮನೆಯಲ್ಲಿ ಬಾಲಕನನ್ನು ಇರಿಸಿದ್ದ ಕಿಡ್ನಾಪರ್ ಗಳು.
ಮಂಗಳೂರು ಮತ್ತು ಕೋಲಾರ ಪೊಲೀಸರು ಜಂಟಿ ಕಾರ್ಯಾಚರಣೆಸಿದ್ದು, ಮೊಬೈಲ್ ಕರೆಗಳನ್ನು ಆಧರಿಸಿ ಮಂಡ್ಯದ ಗಂಗಾಧರ, ಬೆಂಗಳೂರಿನ ಕೋಮಲ್ ಸೇರಿದಂತೆ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೋರ್ಟ್ ಗೆ ಹಾಜರು:
ಡಿ.19ರಂದು ಆರೋಪಿಗಳನ್ನು ಕೊಲಾರ ಪೊಲೀಸರು ಮಾಲೂರು ಕೋರ್ಟ್ ಗೆ ಹಾಜರುಪಡಿಸಿ‌, ಬಳಿಕ ಬೆಳ್ತಂಗಡಿ ಪೊಲೀಸರ ‌ವಶಕ್ಕೊಪ್ಪಿಸುವ ಸಾಧ್ಯತೆ ಇದೆ.

ಬಾಲಕನ ಸಂಭಾಷಣೆ:
ಡಿ.19ರಂದು ಬಾಲಕ ಮನೆಯವರೊಂದಿಗೆ ಮಾತನಾಡಿದ್ದು, ತಾನು ಸುರಕ್ಷಿತವಾಗಿರುವುದಾಗಿ ಸಂದೇಶವನ್ನು ಉಜಿರೆಯ ತನ್ನ ಪೋಷಕರಿಗೆ ತಿಳಿಸಿದ್ದಾನೆ.

ಇಂದು ಪೋಷಕ ಮಡಿಲಿಗೆ ಬಾಲಕ:
ಅನುಭವ್ ನನ್ನು‌ ಬೆಳ್ತಂಗಡಿ ‌ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ‌. ನೇತೃತ್ವದ ತಂಡ ಉಜಿರೆಗೆ ಕರತರಲಿದ್ದಾರೆ. ಶನಿವಾರ ಸಂಜೆಯೊಳಗೆ‌ ಬಾಲಕ ಪೋಷಕರ ಮಡಿಲು‌ ಸೇರಲಿದ್ದಾನೆ.

ಸಾರ್ವಜನಿಕರ ‌ಮೆಚ್ಚುಗೆ:
ಕಗ್ಗಂಟಾಗಿದ್ದ ಪ್ರಕರಣವನ್ನು ಪೊಲೀಸರು ಅತೀ ಕಡಿಮೆ ಸಮಯದಲ್ಲಿ ಬೇಧಿಸುವ ಜೊತೆಗೆ ಬಾಲಕನನ್ನು ರಕ್ಷಣೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

error: Content is protected !!