ಬೆಳ್ತಂಗಡಿ: ಉಜಿರೆ ಬಾಲಕ ಅಪಹರಣ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದ್ದು, ಬಾಲಕ ಅನುಭವ್ ರಕ್ಷಣೆ ಮಾಡಲಾಗಿದೆ.
ಕಿಡ್ನಾಪ್ ಆಗಿದ್ದ ಬಾಲಕನನ್ನು ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಕೂರ್ಣಹೊಸಹಳ್ಳಿಯ ಮನೆಯಲ್ಲಿ ಬಚ್ಚಿಡಲಾಗಿತ್ತು ಎನ್ನಲಾಗಿದೆ. ಪ್ರಕರಣ ಸಂಬಂಧ 6 ಜನರನ್ನು ಬಂಧಿಸಿರುವ ಕುರಿತು ಮಾಹಿತಿ ಲಭಿಸಿದೆ.
ಕೋಲಾರ ಜಿಲ್ಲೆ ಎಸ್.ಪಿ. ಕಾರ್ತಿಕ್ ರೆಡ್ಡಿ ನೆರವಿನಿಂದ ಆರೋಪಿಗಳ ಹಾಗೂ ಬಾಲಕ ಪತ್ತೆ ಮಾಡಲಾಗಿದೆ. ಬಾಲಕನ ಪತ್ತೆಗೆ 5 ವಿಶೇಷ ತಂಡ ರಚಿಸಲಾಗಿತ್ತು. ದ.ಕ.ಜಿಲ್ಲೆ ಎಸ್.ಪಿ. ಲಕ್ಷ್ಮೀ ಪ್ರಸಾದ್ ಅವರೂ ಉಜಿರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ವಿಶೇಷ ಮಾರ್ಗದರ್ಶನ ನೀಡಿದ್ದರು.
ಒಟ್ಟಿನಲ್ಲಿ ಕೇವಲ 36 ಗಂಟೆಯೊಳಗೆ ಆರೋಪಿಗಳ ಪತ್ತೆ ನಡೆಸುವ ಜೊತೆಗೆ ಪೊಲೀಸರು ಬಾಲಕನ ರಕ್ಷಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.