ಡಿಜಿಟಲ್‌ ಕರೆನ್ಸಿ ‘ಬಿಟ್ ಕಾಯಿನ್’: ಭಾರತದಲ್ಲಿಲ್ಲ ಮಾನ್ಯತೆ: ನಂಬಿ ಮೋಸ ಹೋಗುವ ಮುನ್ನ, ಇರಲಿ ಎಚ್ಚರ

ಬೆಳ್ತಂಗಡಿ: ಉಜಿರೆಯಲ್ಲಿ ‌ನಡೆದ‌ ಬಾಲಕನ ಅಪಹರಣ ‌ಪ್ರಕರಣದ ನಂತರ ಇದೀಗ‌ ಬಿಟ್ ಕಾಯಿನ್ ವಿಚಾರ ಮತ್ತೆ ಸುದ್ದಿಯಲ್ಲಿದೆ. ಈ‌ ಹಿಂದೆ‌ ಬೆಂಗಳೂರಿನಲ್ಲಿ ‌ಬಿಟ್ ಕಾಯಿನ್ ಎಟಿಎಂ ಸೆಂಟರ್ ತೆರೆದು ವಿವಾದ ಉಂಟಾಗಿ ‌ಅದನ್ನು ನಿಷೇಧಿಸಲಾಗಿತ್ತು. ಹಾಗಾದ್ರೆ ಬಿಟ್ ಕಾಯಿನ್ ಅಂದ್ರೆ ಏನು… ಇಲ್ಲಿದೆ ಉತ್ತರ…

ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ, ದಿನಾರ್ ನಂತೆ ಯಾವುದೇ ದೇಶ, ಪ್ರಾಂತ್ಯಗಳಿಗೆ‌ ಸೀಮಿತವಾಗಿಲ್ಲ. ನಗದು ರೂಪದಲ್ಲಿ ಇರುವುದಿಲ್ಲ, ಮುಖ್ಯವಾಗಿ ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ. ಇಡೀ ವಿಶ್ವದಲ್ಲಿ ಇದರ ಚಲಾವಣೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸ ರೂಪಿಸಲಾಗಿದೆ.

ಅಂತರ್ಜಾಲ ಮೂಲಕ ವರ್ಗಾವಣೆ:
ಡಿಜಿಟಲ್ ಮೂಲಕ ತ್ವರಿತವಾದ ವರ್ಗಾವಣೆ ಸಾಧ್ಯ. ಯಾವುದೇ ಅಡೆತಡೆಯಿಲ್ಲದೇ ಜಗತ್ತಿನಾದ್ಯಂತ ಚಲಾವಣೆ ಮಾಡಲು‌ ಸಾಧ್ಯ. ವರ್ಡ್‌ಪ್ರೆಸ್, ರೆಡಿಟ್, ನೇಮ್‌ಚೀಪ್ ಮತ್ತು ಫ್ಲಾಟ್ಟರ್ ನಂತಹ ಅಂತರ್ಜಾಲ ತಾಣಗಳ ಮೂಲಕ ಬಿಟ್‌ಕಾಯಿನ್‌ಗಳನ್ನು ನೇರವಾಗಿ ವರ್ಗಾವಣೆ ಮಾಡಬಹುದು.

ನಷ್ಟದ ಸಾಧ್ಯತೆ ‌ಹೆಚ್ಚು:
ಬಿಟ್ ಕಾಯಿನ್ ನಿಯಮಾವಳಿಗಳು‌ ವಿಚಿತ್ರವಾಗಿದೆ. ಒಮ್ಮೆ ಬಿಟ್ ಕಾಯಿನ್ ಸಂದಾಯವಾದರೆ ಮತ್ತೆ ಮರಳಿ ಪಡೆಯಲು ಸಾಧ್ಯವಿಲ್ಲ. ಅಪರಾಧಿಗಳು ಆರ್ಥಿಕ ಅಪರಾಧ, ಮೋಸಗಳನ್ನು ಎಸಗಲು ಸಾಧ್ಯವಿದೆ. ಡ್ರಗ್ಸ್/ಮಾದಕ ದ್ರವ್ಯಗಳ ಕಳ್ಳಸಾಗಣೆಗೆ ಬಿಟ್ ಕಾಯಿನ್ ಬಳಸಲ್ಪಡುತ್ತದೆ. ಬಿಟ್ ಕಾಯಿನ್ ವರ್ಗಾವಣೆ ಯಾರು ಯಾರಿಗೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಬಿಟ್ ಕಾಯಿನ್ ಬೆಲೆ ಒಂದೇ ರೀತಿ ಇರುವುದಿಲ್ಲ. ಕಾಯಿನ್ ಮೌಲ್ಯದಲ್ಲಿ ತೀವ್ರ ಏರಿಳಿತಗಳಿಗೆ ಒಳಗಾಗುವುದರಿಂದ ಹೂಡಿಕೆದಾರರಿಗೆ ಭಾರಿ ನಷ್ಟ ಆಗುವ ಸಾಧ್ಯತೆಗಳೇ ಹೆಚ್ಚು.

ಭಾರತದಲ್ಲಿ ಇಲ್ಲ ಮಾನ್ಯತೆ:
ಬಿಟ್ ಕಾಯಿನ್ ಭಾರತದಲ್ಲಿ ಕಾನೂನು ಬದ್ದವಾಗಿ ಚಲಾವಣೆಯಲ್ಲಿ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ಮಾನ್ಯತೆ ‌ನೀಡಿಲ್ಲ.

error: Content is protected !!