ಉಜಿರೆ ಬಾಲಕನ ಕಿಡ್ನಾಪ್: ₹ 17 ಕೋಟಿ ಯಿಂದ ಬೇಡಿಕೆಯನ್ನು 10 ಕೋಟಿಗೆ ಇಳಿಸಿದ ಕಿಡ್ನಾಪರ್ಸ್..! ಸಾಮಾಜಿಕ ಜಾಲತಾಣಗಳ ಮುಖಾಂತರ ಬೇಡಿಕೆ!

ಬೆಳ್ತಂಗಡಿ: ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲಕ ಬಿಜೋಯ್ ಇವರ ಪುತ್ರ ಅನುಭವ್ (8) ನನ್ನು‌ ಡಿ.17 ರಂದು ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದ 3 ರಿಂದ 4 ಮಂದಿ ಸೇರಿ ಬಾಲಕನನ್ನು ಅಪಹರಿಸಿದ್ದು, 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ ಎಂದು ಬಾಲಕನ ಅಜ್ಜ ಎಕೆ ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿಯಿಂದ ಕಿಡ್ನಾಪರ್ಸ್ ಬಿಜೊಯ್ ಅವರಲ್ಲಿ ನಿರಂತರ ಸಾಮಾಜಿಕ ಜಾಲತಾಣಗಳ ಮುಖಾಂತರ ಚಾಟ್ ಮಾಡುತಿದ್ದು ಇದೀಗ ತಮ್ಮ ಬೇಡಿಕೆಯನ್ನು 100 ಬಿಟ್ ಕಾಯಿನ್ ನಿಂದ 60 ಬಿಟ್ ಕಾಯಿನ್ ಅಂದರೆ 10 ಕೋಟಿ 20ಲಕ್ಷಕ್ಕೆ ಇಳಿಸಿದ್ದಾರೆ ಎಂದು ತಿಳಿದುಬಂದಿದೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮುಖಾಂತರ ಚಾಟ್ ಮಾಡುತ್ತ ಇರುವುದರಿಂದ ಲೊಕೇಷನ್ ಹುಡುಕಲು ಸಮಸ್ಯೆಯಾಗುತ್ತಿದೆ ನಿನ್ನೆ ಕಾಲ್ ಮಾಡಿದ ನಂಬರ್ ಲೊಕೇಶನ್ ಹಾಸನ ಪರಿಸರದಲ್ಲಿ ತೋರಿಸುತ್ತಿದ್ದು ಈ ಬಗ್ಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

error: Content is protected !!