ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಸರಕಾರಿ ಕಛೇರಿ ಅಧಿಕಾರಿ, ಸಿಬ್ಬಂದಿಗಳಿಗೆ ಸುತ್ತೋಲೆ

ಬೆಂಗಳೂರು: ಸರಕಾರಿ ಸೇವೆ ಸಾರ್ವಜನಿಕ ಸೇವೆಯಾಗಿದ್ದು, ಸಮಸ್ಯೆ ಕುರಿತು ವ್ಯವಹರಿಸಲು ಸರಕಾರಿ ಕಛೇರಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೌಜನ್ಯ ಹಾಗೂ ಸಮಾಧಾನದಿಂದ ವರ್ತಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆ-ಸು ತಪಾಸಣೆ) ಇಲಾಖೆಯ ಅಧೀನ ಕಾರ್ಯದರ್ಶಿ ಎಚ್. ಸಿ. ಹರ್ಷರಾಣಿ ಸುತ್ತೋಲೆ ಹೊರಡಿಸಿದ್ದು, ಕಛೇರಿಗಳಿಗೆ ತಮ್ಮ ಸೇವೆ ಅರಸಿ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿ-ಸಿಬ್ಬಂದಿಗಳು ತಾರತಮ್ಯ ನೀತಿ ಅನುಸರಿಸದೆ ಬಂದವರೆಲ್ಲರಿಗೂ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಹೇಳುವಂತೆ ಸೂಚಿಸಿದ್ದಾರೆ.

error: Content is protected !!