ಮಚ್ಚಿನ: ಸಂಗೀತ ತರಬೇತಿ ಕೇಂದ್ರ ಉದ್ಘಾಟನೆ

ಮಚ್ಚಿನ: ರೋಟರಿ ಕ್ಲಬ್ ಮಡಂತ್ಯಾರ್, ನ್ಯೂ ಪ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ, ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ, ವಿದ್ಯಾ ಸಾಗರ್ ಆಂಗ್ಲ ಮಾಧ್ಯಮ ಶಾಲೆ ಮಚ್ಚಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಂಗೀತ ತರಬೇತಿ ಕೇಂದ್ರವನ್ನು ಖ್ಯಾತ ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಉದ್ಘಾಟಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಪಿ. ಎಚ್. ಯಫ್. ಆರ್. ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಚ್ಚಿನ ವಿದ್ಯಾ ಸಾಗರ್ ಅಂಗ್ಲ ಮಾಧ್ಯಮ ಶಾಲೆ ಸಂಚಾಲಕ ಆರ್. ವೆಂಕಟ್ ರೆಡ್ಡಿ, ಸಂಗೀತ ಗುರುಗಳಾದ ‌ವಿಶ್ವನಾಥ ಆಚಾರ್ಯ, ಆರ್. ರಾಮ್ ಭಟ್ ಉಪಸ್ಥಿತರಿದ್ದರು. ಆರ್. ಹರ್ಷ ನಾರಾಯಣ ಶೆಟ್ಟಿ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಆರ್. ರಾಜೇಶ್ ಕೃಷ್ಣಪ್ಪ ಮಾನ್ಯ ನಿರೂಪಿಸಿದರು

error: Content is protected !!