ಅಮೇರಿಕಾದ ಯುನಿವರ್ಸಿಟಿ ಯಿಂದ ‌ಡಾಕ್ಟರೇಟ್ ಪಡೆದ ಬೆಳ್ತಂಗಡಿಯ ಡಾ.‌ರವೀಶ್ ಮಯ್ಯ

ಬೆಳ್ತಂಗಡಿ: ಅಮೇರಿಕಾದ ‘ಯುನಿರ್ವಸಿಟಿ ಆಫ್ ಮೇರಿಲ್ಯಾಂಡ್’ ನಿಂದ ಬೆಳ್ತಂಗಡಿ ಯ ಹುಡುಗನೊಬ್ಬ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಾಧಾಕೃಷ್ಣ ಮಯ್ಯರ ಪುತ್ರರಾಗಿರುವ ಡಾ.‌ರವೀಶ್ ಮಯ್ಯ ಅವರು ಪ್ರಕೃತ ಅಮೇರಿಕಾದ ಪ್ರತಿಷ್ಠಿತ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಈ ವಿಶೇಷ ಸಾಧನೆ ಮಾಡಿದ್ದಾರೆ.

ಅವರು ಡಾ. ಶಿವ ವಿಶ್ವನಾಥನ್ ಅವರ ಮಾರ್ಗರ್ಶನದಲ್ಲಿ ಮಂಡಿಸಿದ ‘ಮೆಕ್ಯಾನಿಸಂ ಡಿಸೈನ್ ಟು ಮಿಟಿಗೇಟ್ ಡಿಸ್‌ಪಾರಿಟೀಸ್ ಇನ್ ಆನ್‌ಲೈನ್ ಪ್ಲಾಟ್‌ಫಾರಂ: ಎವಿಡೆನ್ಸ್ ಫ್ರಮ್ ಎಂಪೆರಿಕಲ್ ಸ್ಟಡೀಸ್” (Mechanism Designs to Mitigate Disparities in Online Platform: Evidence from Empirical Studies) ಎಂಬ ಮಹಾಪ್ರಬಂಧಕ್ಕೆ ಈ ಪದವಿ ಗಳಿಸಿದ್ದಾರೆ.

error: Content is protected !!