ಹಾವೇರಿಯಿಂದ ಧರ್ಮಸ್ಥಳಕ್ಕೆ 76ರ ವೃದ್ಧರಿಂದ ಪಾದಯಾತ್ರೆ: 281. ಕೀ.ಮೀ. ನಡೆದುಬಂದ ಮಾಲತೇಶ: 40 ವರ್ಷಗಳಿಂದ ನಿರಂತರ ಪ್ರಯಾಣ

ಬೆಳ್ತಂಗಡಿ: ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ 76 ವರ್ಷದ ಮಾಲತೇಶ ಗೊರಪಜ್ಜ ಪಾದಯಾತ್ರೆ ಮೂಲಕ ಶನಿವಾರ ಧರ್ಮಸ್ಥಳ ತಲುಪಿದ್ದಾರೆ.

ಅವರು ಕಳೆದ 40 ವರ್ಷಗಳಿಂದ ಪ್ರತಿವರ್ಷ ಲಕ್ಷ ದೀಪೋತ್ಸವಕ್ಕೆ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ. ನ. 17 ರಂದು ಅವರು ಹಾನಗಲ್‌ನಿಂದ ಪಾದಯಾತ್ರೆ ಪ್ರಾರಂಭಿಸಿ ದಿನಕ್ಕೆ 20 ಕಿ.ಮೀ. ದೂರ ಪ್ರಯಾಣಿಸುತ್ತಾರೆ.
ಪಾದಯಾತ್ರೆಯಲ್ಲಿ ತನಗೆ ಎಲ್ಲರೂ ಸಹಕಾರ ನೀಡುತ್ತಾರೆ. ಪಾದಯಾತ್ರೆಯಿಂದ ತನ್ನ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಿದೆ. ಮಾನಸಿಕ ನೆಮ್ಮದಿ, ಶಾಂತಿ, ಸಂತೋಷ ಸಿಕ್ಕಿದೆ ಎಂದು ಅಭಿಮಾನದಿಂದ ಹೇಳುತ್ತಾರೆ ಮಾಲತೇಶ ಗೊರಪಜ್ಜ.

error: Content is protected !!