ಧರ್ಮಸ್ಥಳ: ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ನೆಲೆಯಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಮುಷ್ಕರದ ಹಿನ್ನೆಲೆ ಧರ್ಮಸ್ಥಳ ಡಿಪ್ಪೋದಿಂದ ಯಾವುದೇ ಬಸ್ ಓಡಾಟ ನಡೆಸದೆ ಮುಷ್ಕರವನ್ನು ಬೆಂಬಲಿಸಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ ಅದಲ್ಲದೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವವು ನಡೆಯುತ್ತಿದ್ದು ನಾನಾ ಕಡೆಯಿಂದ ಆಗಮಿಸಿದ ಭಕ್ತರು ಹಿಂದಿರುಗಲು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಎರಡನೇ ಶನಿವಾರ ರಜೆ ಇರುವುದರಿಂದ ವಿವಿಧ ಕಡೆಗಳಿಂದ ಧರ್ಮಸ್ಥಳಕ್ಕೆ ಬರುವ ಭಕ್ತರಿಗೂ ತೊಂದರೆ ಉಂಟಾಗಿದೆ.
ಬಸ್ ನಿಲ್ದಾಣದಲ್ಲೇ ಉಪಹಾರ ವ್ಯವಸ್ಥೆ
ಶನಿವಾರ ಮುಷ್ಕರದಿಂದಾಗಿ ನೂರಾರು ಸಾರಿಗೆ ಸಿಬಂದಿ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಉಪಹಾರ ವ್ಯವಸ್ಥೆ ಮಾಡಿಕೊಂಡರು. ಚಾಲಕರ ನಿರ್ವಾಹಕರು ಸೌಟು ಹಿಡಿದು ಅಡುಗೆ ಸಿದ್ಧಪಡಿಸಿದ್ದಾರೆ. ನಿಲ್ದಾಣದಲ್ಲೇ ಪ್ರಯಾಣಿಕರಿಗು ಉಪಹಾರ ವ್ಯವಸ್ಥೆ ಮಾಡಿದರು.