ಮೀನು ಹಿಡಿಯಲು ತೆರಳಿ ಸಾವು ಪ್ರಕರಣ: ಓರ್ವನ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಉಜಿರೆ ಶಿವಾಜಿ ನಗರ ನಿವಾಸಿ ರಮೇಶ್ ಗೌಡ ಅವರು ಮೀನು ಹಿಡಿಯುಲು ತೆರಳಿ ನಾಪತ್ತೆಯಾದ ಪ್ರಕರಣ ಡಿ 7ರಂದು ನಡೆದಿತ್ತು. ಈ ಬಗ್ಗೆ ರಮೇಶ್ ಅವರ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಸಂದರ್ಭದಲ್ಲಿ ರಮೇಶ್ ಗೌಡ ಅವರು ಬೆಳ್ತಂಗಡಿ ಉಜಿರೆ ಗ್ರಾಮದ ನಿವಾಸಿ ಆರೋಪಿ ಸುಂದರ ಶೆಟ್ಟಿ(61) ಎಂಬವರೊಂದಿಗೆ ಡಿ.7ರಂದು ಸಂಜೆ 5.30ಕ್ಕೆ ಮೀನು ಹಿಡಿಯಲು ಹೋಗಿದ್ದರು. ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಸೋಮವತಿ ನದಿಯಲ್ಲಿ ರಮೇಶ್ ಗೌಡರವರು ಮುಳುಗಿದ್ದು, ಈ ಬಗ್ಗೆ ಆರೋಪಿ ಸುಂದರ ಶೆಟ್ಟಿಯವರಿಗೆ ತಿಳಿದಿದ್ದರೂ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಪೊಲೀಸ್ ಠಾಣೆಗಾಗಲೀ, ರಮೇಶ್ ಗೌಡ ರವರ ಮನೆಯವರಿಗಾಗಲೀ, ಮಾಹಿತಿ ನೀಡಿಲ್ಲ. ರಮೇಶ್ ಗೌಡ ಅವರು ಕಾಣೆಯಾದ ಬಗ್ಗೆ ದಾಖಲಾದ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಿದ ಸಮಯದಲ್ಲೂ ಮಾಹಿತಿ ನೀಡದಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ. ಆದ್ದರಿಂದ ಆರೋಪಿ ಸುಂದರ ಶೆಟ್ಟಿ ಅವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!