ಬೆಳ್ತಂಗಡಿ- ಚಾರ್ಮಾಡಿ ‌ಹೆದ್ದಾರಿ ಬದಿ ಚಿರತೆ‌ ಪ್ರತ್ಯಕ್ಷ: ಉರ್ಪೆಲ್ ಗುಡ್ಡ ಪ್ರದೇಶದಿಂದ ಕಾಪು ರಕ್ಷಿತಾರಣ್ಯಕ್ಕೆ ಸವಾರಿ

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಬಂಟ್ವಾಳ- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡ ಪ್ರದೇಶದಲ್ಲಿ ಸೋಮವಾರ(ಡಿ.7ರಂದು) ರಾತ್ರಿ ಚಿರತೆ ಕಂಡು ಬಂದಿದೆ. ರಾತ್ರಿ 10 ಗಂಟೆ ಸುಮಾರಿಗೆ ಉರ್ಪೆಲ್ ಗುಡ್ಡ ಪ್ರದೇಶದಿಂದ ಕಾಪು ರಕ್ಷಿತಾರಣ್ಯದ ಕಡೆಗೆ ಚಿರತೆ ರಸ್ತೆ ದಾಟಿದ್ದು, ಕಕ್ಕಿಂಜೆಯ ಟೆಂಪೋ ಸವಾರರಿಗೆ ಕಂಡು ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನದಂತೆ ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್, ಅರಣ್ಯ ರಕ್ಷಕ ಪಾಂಡುರಂಗ ಕಮತಿ ಸ್ಥಳೀಯರ ಸಹಕಾರದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅ.20ರಂದು ಇದೇ ಪರಿಸರದಲ್ಲಿ ಚಿರತೆ ಕಂಡು ಬಂದಿತ್ತು.

ಭಾನುವಾರ ಈ ಹೆದ್ದಾರಿಯ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಒಂಟಿ ಸಲಗ ಪಿಕ್ ಅಪ್ ವಾಹನದ ಮೇಲೆ ದಾಳಿ ಮಾಡಿತ್ತು.

error: Content is protected !!