ರುಡ್‌ಸೆಟ್‌ನಲ್ಲಿ ಮೊಬೈಲ್ ಫೋನ್ ರಿಪೇರಿ, ಜೇನುಕೃಷಿ ಉಚಿತ ತರಬೇತಿ: ಅರ್ಜಿ‌ ಆಹ್ವಾನ

ಬೆಳ್ತಂಗಡಿ: ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗ ಅರಸುತ್ತಿರುವವರಿಗೆ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯುವ ಉಜಿತ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೊಬೈಲ್ ಫೋನ್ ರಿಪೇರಿ (30 ದಿನಗಳು) 10-12-2020 ರಿಂದ 08-01-2021 ರವರೆಗೆ, ಜೇನು ಕೃಷಿ (10 ದಿನಗಳು ) 14-12-2029 ರಿಂದ 23-12-2020 ರವರೆಗೆ ತರಬೇತಿ ಆಯೋಜಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಹಿಳೆಯರ ಟೈಲರಿಂಗ್, ಫೊಟೋಗ್ರಫಿ ಮತ್ತು ವಿಡಿಯೋಗ್ರಫಿ, ಸಿಸಿ ಕೆಮರಾ ಅಳವಡಿಸಿವಿಕೆ, ಕೃತಕ ಆಭರಣ ತಯಾರಿಕೆ, ಪಪ್ಪಡ್, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ, ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ರಬ್ಬರ್ ಟ್ಯಾಪಿಂಗ್, ಕಂಪ್ಯೂಟರ್ ಡಿ.ಟಿ.ಪಿ, ದ್ವಿ ಚಕ್ರ ವಾಹನ ರಿಪೇರಿ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಬಿಪಿಲ್ ಕಾರ್ಡುದಾರರು, ಉದ್ಯೋಗ ಖಾತ್ರಿ ಸದಸ್ಯತ್ವ ಮತ್ತು ಸರ್ಕಾರಿ ಸ್ವ- ಸಹಾಯ ಸಂಘದ ಸದಸ್ಯರಿಗೆ ಆದ್ಯತೆ ನಿಡಲಾಗುವುದು. ತರಬೇತಿಗಳಿಗೆ ಸೇರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಬಿಳಿ ಹಾಳೆಯಲ್ಲಿ ಅಥವಾ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ:‌ ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‌ಸೈಟ್ ಮೂಲಕ www.rudsetujire.com ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

error: Content is protected !!