ಮುಂಡಾಜೆ, ಮರ ಬಿದ್ದು ರಸ್ತೆ ಸಂಚಾರ ವ್ಯತ್ಯಯ: ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು

ಮುಂಡಾಜೆ: ಮಂಗಳೂರು ವಿಲ್ಲೂಪುರಂ ರಾಷ್ಟ್ರೀಯ ಹೆದ್ದಾರಿ 73ರ ಮುಂಡಾಜೆ ಸಮೀಪದ ಸೋಮಂತಡ್ಕ ಎಂಬಲ್ಲಿ ಮರವೊಂದು ವಿದ್ಯುತ್ ಲೈನ್ ಹಾಗೂ ರಸ್ತೆ ಮೇಲೆ ಬಿದ್ದು ಸುಮಾರು ಒಂದು ತಾಸು ಸಂಚಾರದಲ್ಲು ವ್ಯತ್ಯಯ ಉಂಟಾಯಿತು.

ಭಾನುವಾರ ಹೆಚ್ಚಿನ ವಾಹನ‌ಸಂದಣಿ ಇದ್ದ ಕಾರಣ ವಾಹನಗಳ ಸರತಿ ಸಾಲು ಕಂಡುಬಂದಿತು.

ಅರಣ್ಯ, ಮೆಸ್ಕಾಂ ಇಲಾಖೆಗಳು ಮುಂಡಾಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 

 

 

 

 

 

 

 

ಮರ ಬಿದ್ದು, ವಿದ್ಯುತ್ ಕಂಬವೊಂದು ಮುರಿದ ಹಿನ್ನೆಲೆ ಮೆಸ್ಕಾಂ ಇಲಾಖೆ ತಾತ್ಕಲಿಕವಾಗಿ ಬದಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಆ ಭಾಗದ ಜನರಿಗೆ ವಿದ್ಯುತ್ ತೊಂದರೆಯನ್ನು ಸರಿಪಡಿಸಿದೆ.

error: Content is protected !!