ಕುಪ್ಪೆಟ್ಟಿ ರಸ್ತೆ ಅಪಘಾತ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು. ಪರಾರಿಯಾದ ಪಿಕಪ್ ವಾಹನವನ್ನು ಪತ್ತೆ ಹಚ್ಚಿದ ಪೊಲೀಸರು

ಕುಪ್ಪೆಟ್ಟಿ: ಕುಪ್ಪೆಟ್ಟಿ ಸಮೀಪದ ಹುಣ್ಸೆಕಟ್ಟೆ ಎಂಬಲ್ಲಿ ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಉರುವಾಲು ನಿವಾಸಿ ಕೃಷ್ಣಪ್ರಸಾದ್ ಶೆಟ್ಟಿ (36) ಹಾಗೂ ಕಣಿಯೂರಿನ ಜಯರಾಮ ಗೌಡ (28) ಮೃತ ದುರ್ದೈವಿಗಳು.

ನ. 29ರ ರಾತ್ರಿ ದುರ್ಘಟನೆಯಲ್ಲಿ ಸಾವನ್ನಪ್ಪಿದ ಇಬ್ಬರು ಬೈಕ್ಕಿನಲ್ಲಿ ಮನೆಗೆ ಹೋಗುತ್ತಿರುವ ಸಂದರ್ಭ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಕಲ್ಲೇರಿಯಿಂದ ಬೈಕಿನಲ್ಲಿ ತಮ್ಮ‌ಮನೆಗೆ ತೆರಳುತ್ತಿದ್ದ ಹುಣ್ಸೆಕಟ್ಟೆ ಬಳಿ ಅತೀ ವೇಗವಾಗಿ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಘಟನೆ ನಡೆದ ಸ್ಥಳದ ಅಸುಪಾಸಿನ‌ ಮನೆಯವರಿಗೆ ದೊಡ್ಡ ಶಬ್ದ ಕೇಳಿದೆ. ತಕ್ಷಣ ಬಂದು ನೋಡಿದಾಗ ಬೈಕ್ ಹಾಗೂ ಇಬ್ಬರು ಸ್ಥಳದಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ, ತನಿಖೆ ನಡೆಸುತ್ತಿದ್ದಾರೆ.

ಪಿಕಪ್ ವಾಹನ ಪತ್ತೆ ಹಚ್ಚಿದ ಪೊಲೀಸರು

ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು‌ ಪರಾರಿಯಾದ ವಾಹನ ಪತ್ತೆ ಹಚ್ಚಲು ನಾಕಬಂಧಿ ಮಾಡಿ ಪರಾರಿಯಾದ ಪಿಕಪ್ ವಾಹನವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕೊಯ್ಯೂರು ಸಮೀಪದ ಪಿಕಪ್ ವಾಹನ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!