ಪರೀಕ್ಷೆಯ ಸೋಲು ಬದುಕಿನ ಸೋಲಲ್ಲ: ಡಾ.ಯೋಗೀಶ ಕೈರೋಡಿ

ವೇಣೂರು: ಶಾಲಾ ಕಾಲೇಜು ಶಿಕ್ಷಣದಲ್ಲಿ ಪರೀಕ್ಷೆ ಹಾಗೂ ಅಂಕ ಗಳಿಕೆಗೆ ಮಹತ್ವವಿದೆ. ಆದರೆ ಪರೀಕ್ಷೆಯ ಸೋಲು ಬದುಕಿನ ಸೋಲಲ್ಲ. ಶೈಕ್ಷಣಿಕವಾಗಿ ಹಿಂದಿರುವವರು ಬದುಕಿನಲ್ಲಿ ಯಶಸ್ಸು ಕಂಡ ನಿದರ್ಶಗಳಿವೆ. ಅಂಕದ ಅತಿ ವೈಭವೀಕರಣ ಸಲ್ಲದು. ವಿಶಾಲ ಜೀವನದ ಕಲ್ಪನೆ ಹಾಗೂ ಸಾಧ್ಯತೆಯನ್ನು ಬೆಳೆಯುವ ಮಗುವಿಗೆ ಉಣಿಸಬೇಕು ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ ಹೇಳಿದರು.
ಅವರು ಆರಂಬೋಡಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲೇಖನ ಸಾಮಾಗ್ರಿ ವಿತರಿಸಿ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.
ಐತೇರಿ ಮನೋಜ್ ಶೆಟ್ಟಿಯವರ ಮಗ ತಸ್ವಿಕ್ ನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಆರಂಬೋಡಿ ಶಾಲಾ ಸರ್ವ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಾಗ್ರಿ ವಿತರಿಸಿ‌, ಸಾಂಸ್ಕೃತಿಕ ಹಾಗೂ ಚಿಂತನಾಗೋಷ್ಠಿಯ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಆರಂಬೋಡಿ ಶಾಲಾ ಮುಖ್ಯ ಶಿಕ್ಷಕಿ ಸುಶೀಲ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಯಶವಂತಿ, ಆರಂಬೋಡಿ ಶಾಲಾ ಹಳೆವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಪಾಲ್ಯ, ಹಿರಿಯರಾದ ಗುಲಾಬಿ ಶೆಟ್ಟಿ‌‌‌‌, ಹರಿಯಪ್ಪ ಶೆಟ್ಟಿ, ಜಯಂತಿ , ಧನ್ಯಶ್ರೀ ಉಪಸ್ಥಿತರಿದ್ದರು . ರಂಗಭೂಮಿ ಕಲಾವಿದ ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!