ರಕ್ಷಿತ್ ಶಿವರಾಂ ಫೌಂಡೇಶನ್: ವಿದ್ಯಾರ್ಥಿ ವೇತನ ವಿತರಣೆ

ಬೆಳ್ತಂಗಡಿ: ಹೆರಾಜೆ ನೀಲಮ್ಮ ವೆಂಕಪ್ಪ ಪೂಜಾರಿಯವರ ಸ್ಮರಣಾರ್ಥ “ರಕ್ಷಿತ್ ಶಿವರಾಂ ಫೌಂಡೇಶನ್” ವತಿಯಿಂದ ಉಪ್ಪಿನಂಗಡಿ ಸುತ್ತಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು‌.

ಫೌಂಡೇಶನ್ ಗ್ರಾಮಿಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಉಪ್ಪಿನಂಗಡಿ ಮೂರ್ತೆದಾರರ ಸಹಕಾರ ಬ್ಯಾಂಕ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಸ್ಥಾಪಕ ವರದರಾಜ್, ನಿವೃತ್ತ ಎಸ್.ಪಿ. ಪಿತಾಂಬರ್ ಹೇರಾಜೆ, ಪೌಂಡೇಶನ್ ನ ರಕ್ಷಿತ್ ಶಿವರಾಂ, ಜಯ ವಿಕ್ರಮ ಕಲ್ಲಾಪು, ಯುವ ವಾಹಿನಿಯ ಚಂದ್ರಶೇಖರ್, ಜಯರಾಂ ಬಂಗೇರ ಉಪಸ್ಥಿತರಿದ್ದರು.

error: Content is protected !!