ಬೆಳ್ತಂಗಡಿ: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದಲ್ಲಿ ಅರಸಿನಮಕ್ಕಿ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ನ. 23ರಿಂದ 28ರವರೆಗೆ ಅರಸಿನಮಕ್ಕಿಯಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಸಹಕಾರ ಭಾರತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ತಿಳಿಸಿದರು.
ಅವರು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನ.23ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಉದ್ಘಾಟನೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್, ಸಹಕಾರ ಭಾರತಿ, ಗ್ರಾಮ ವಿಕಾಸ ಸಮಿತಿ ಪ್ರಮುಖರು ಭಾಗವಹಿಸಲಿದ್ದಾರೆ. ನ.28ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಹರೀಶ್ ಪೂಂಜ ಸಹಕಾರ ಭಾರತಿ ಜಿಲ್ಲಾಧ್ಯಕ್ಷರು, ಗ್ರಾಮ ವಿಕಾಸ ಸಮಿತಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ತರಬೇತಿ ನಡೆಯಲಿದ್ದು, ತರಬೇತಿಗೆ ಸೇರ ಬಯಸುವವರು, ಸಂಬಂದಿಸಿದ ಮೇಲ್ವಿಚಾರಕರಿಗೆ ಕರೆ ಮಾಡಿ ಮಾಹಿತಿ ನೀಡಬೇಕಿದೆ. ಫ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಯೋಗೀಶ್ ಶಿಬಾಜೆ (7022077619) ಪ್ರಭಾಕರ ಶಿಬಾಜೆ(9902575613), ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ರಾಕೇಶ್ ಶಿಶಿಲ (9481660640),
ಫ್ಯಾಶನ್ ಡಿಸೈನಿಂಗ್ ತಾರಾ ಚಿಪ್ಳೂಣ್ ಕರ್ ಶಿಶಿಲ (9483139852), ದರ್ಣಪ್ಪ ಗೌಡ ಅರಸಿನಮಕ್ಕಿ (9483287278),
ಫುಡ್ ಟೆಕ್ನಾಲಜಿ, ವಿನಯಚಂದ್ರ ಪೆರ್ಲ (9481018286), ನಾರಾಯಣ ಅಭ್ಯಂಕರ್ (9902837169), ಕೃಷಿ ಮತ್ತು ಕಸಿ ಕಟ್ಟುವುದು, ರಂಜಿತ್. ಯು.ಎನ್. ರೆಖ್ಯ (9663487226), ಹೈನುಗಾರಿಕೆ, ಪಿ.ಟಿ.ಮ್ಯಾಥ್ಯೂ ರೆಖ್ಯ (9731995320), ಕೃಷಿ ಉಪಕರಣ ದುರಸ್ತಿ, ಶಿವಾನಂದ ಮಯ್ಯ (9448858854), ಜೇನು ತರಬೇತಿ ದೀಪ್ತಾಂಶು ಅಭ್ಯಂಕರ್ (8197724332), ಅನಂತ ಚಿಪ್ಳೂಣ್ ಕರ್ ಶಿಶಿಲ (8277045852), ವಿದ್ಯುತ್ ಉಪಕರಣ ದುರಸ್ತಿ, ಶ್ರವಣ್ ಶಿಬಾಜೆ (8197716680), ಅವಿನಾಶ್ ಭಿಡೆ (9449468634), ಮೀನು,ಕೋಳಿ,ಆಡು ಸಾಕಣೆ, ಕೃಷ್ಣಪ್ಪ ಗೌಡ ಪಡ್ಡಾಯಿಬೆಟ್ಟು (8762964378) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ.
ತರಬೇತಿ ಪೂರೈಸಿದವರಿಗೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ವೃತ್ತಿ ಪ್ರಮಾಣಪತ್ರ ನೀಡಲಾಗುವುದು.
17 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಭಾಗವಹಿಸಬಹುದು. ನಿಗದಿತ ಅರ್ಜಿ ನಮೂನೆಯನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿ ಅರಸಿನಮಕ್ಕಿಯಲ್ಲಿ ಅಥವಾ ಈ ಸೊಸೈಟಿಯ ಶಿಬಾಜೆ, ಶಿಶಿಲ, ರೆಖ್ಯ ಶಾಖೆಗಳಲ್ಲಿಯೂ ಪಡೆದು ಭರ್ತಿ ಮಾಡಿ ಹತ್ತಿರದ ಸೊಸೈಟಿಯ ಶಾಖಾ ಕಚೇರಿಗಳಲ್ಲಿ ನೀಡಬಹುದು. ಅರ್ಜಿಯೊಂದಿಗೆ ಶಿಬಿರಾರ್ಥಿಗಳು ಆಧಾರ್ ಕಾರ್ಡ್ ನ ಝೆರಾಕ್ಸ್ ಪ್ರತಿ, ಒಂದು ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಹಾಗೂ ಪ್ರವೇಶಾತಿ ಶುಲ್ಕ ರೂ.250 ಪಾವತಿಸಬೇಕು.
ಹೆಚ್ಚಿನ ಮಾಹಿತಿಗೆ ಹ.ಪ್ರಾ.ಕೃ.ಪ.ಸ.ಸಂಘ ನಿ. ಅರಸಿನಮಕ್ಕಿ ಕಚೇರಿ ಮೊಬೈಲ್ ಸಂ (9481927226), ಸಿಇಒ ತ್ಯಾಂಪಣ್ಣ ಶೆಟ್ಟಿಗಾರ್ (9482206380) ಅವರನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅರಸಿನಮಕ್ಕಿ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ತರಬೇತಿಯ ಪ್ರಧಾನ ರಾಜು ಕೆ. ಸಾಲಿಯಾನ್, ಹ.ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್, ಸಂಚಾಲಕ ಧರ್ಮರಾಜ್ ಎ., ಮಾಧ್ಯಮ ಸಂಯೋಜಕ ವೃಷಾಂಕ್ ಖಾಡಿಲ್ಕರ್ ಉಪಸ್ಥಿತರಿದ್ದರು.