ಕಾಜೂರು ದರ್ಗಾ ಶರೀಫ್ ಗೆ ಸರಕಾರದ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಿದಾಯತುಲ್ಲಾ ಭೇಟಿ

ಬೆಳ್ತಂಗಡಿ: ಕರ್ನಾಟಕ ಸರಕಾರದ ನಾಗರಾಭಿವೃದ್ದಿ ಇಲಾಖೆ ಜಂಟಿ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಉಸ್ತುವಾರಿ ಕೆ. ಎ ಹಿದಾಯತುಲ್ಲಾ ಅವರು ಸರ್ವ ಧರ್ಮಿಯರ ಸೌಹಾರ್ದ ಕ್ಷೇತ್ರ ಕಾಜೂರ್ ದರ್ಗಾ ಶರೀಫ್ ಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ. ಯು. ಇಬ್ರಾಹಿಂ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದಿಕ್, ಕೋಶಾಧಿಕಾರಿ ಮೊಹಮ್ಮದ್ ಕಮಾಲ್ ಕಾಜೂರು, ಶಾಲಾ ಪ್ರಾಂಶುಪಾಲ ಹೆಚ್.‌ನಾಸಿರ್ ಮಾಸ್ಟರ್, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

error: Content is protected !!