ಶೇ.3 ಬಡ್ಡಿ ದರದಲ್ಲಿ ಗರಿಷ್ಠ ₹10 ಲಕ್ಷ ಸಾಲ: ಹೆಚ್ಚುವರಿ ಷರತ್ತು ರದ್ದತಿಗೆ ಶಾಸಕ ಹರೀಶ್ ಪೂಂಜ ಮನವಿ

ಬೆಂಗಳೂರು: ದೀರ್ಘಾವಧಿ ಕೃಷಿ ಸಾಲ ನೀಡುವ ಯೋಜನೆ ಹೊರಡಿಸಿದ ಆದೇಶದಲ್ಲಿ ಹೆಚ್ಚುವರಿಯಾಗಿ ಷರತ್ತುಗಳನ್ನು ಅಳವಡಿಸಿದ್ದು, ಈ ಹಿಂದೆ ಇದ್ದ ಷರತ್ತುಗಳನ್ನು ಮುಂದುವರಿಸಿ, ರೈತರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.


ಸಚಿವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ರಾಜ್ಯದ ರೈತರಿಗೆ ಸಹಕಾರಿ ಸಂಸ್ಥೆಗಳು ಶೆ.3 ರ ಬಡ್ಡಿದರ ಅನ್ವಯವಾಗುವಂತೆ ಒಂದು ಕುಟುಂಬಕ್ಕೆ ಗರಿಷ್ಠ ರೂ.10 ಲಕ್ಷಗಳವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ನೀಡುವ ಯೋಜನೆಗೆ ಆದೇಶ ಹೊರಡಿಸಿವೆ. ಆದರೆ ಹೊರಡಿಸಿದ ಆದೇಶದಲ್ಲಿ ಹೆಚ್ಚುವರಿಯಾಗಿ ಷರತ್ತುಗಳನ್ನು ಅಳವಡಿಸಿದ್ದು, ಈ ಷರತ್ತುಗಳು ಒಂದು ವೇಳೆ ಅನ್ವಯವಾದರೆ ರಾಜ್ಯದ ಶೇ.90 ರಷ್ಟು ರೈತಾಪಿ ವರ್ಗ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಆದೇಶವನ್ನೇ ಮುಂದುವರೆಸಿ ರಾಜ್ಯದ ರೈತರ ಕೃಷಿ ಉತ್ಪಾದಕತೆ ಮತ್ತು ಆದಾಯವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವಂತೆ ಎಸ್ ಟಿ ಸೋಮಶೇಖರ್ ಅವರಿಗೆ ಹರೀಶ್ ಪೂಂಜ ಅವರು ಮನವಿ ಮಾಡಿದರು.

error: Content is protected !!