ಸ್ವ-ಉದ್ಯೋಗದಿಂದ ನೆಮ್ಮದಿಯ ಜೀವನ: ಡಾ. ಹೆಗ್ಗಡೆ

ಉಜಿರೆ: ರುಡ್‍ಸೆಟ್ ದೇಶದ ಪ್ರತಿ ಜಿಲ್ಲೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ತರಬೇತಿ, ಮಾರ್ಗದರ್ಶನ ನೀಡುತ್ತಿದೆ. ಜನರಿಗೆ ಕಡಿಮೆ ಅವಧಿಯಲ್ಲಿ ಉಚಿತ ತರಬೇತಿ ನೀಡಿ, ಸ್ವ-ಉದ್ಯೋಗ ಮಾಡುವಂತೆ ಪ್ರೇರೇಪಣೆ ನೀಡುವ ಮೂಲಕ ನೆಮ್ಮದಿ ಜೀವನ ನಡೆಸಲು ದಾರಿ ಕಲ್ಪಿಸಿದೆ. ಇಂದಿನ ದಿನಗಳಲ್ಲಿ ಸ್ವ-ಉದ್ಯೋಗ ಮಾಡಲು ಹೆಚ್ಚಿನ ಅವಕಾಶಗಳು ಇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಉಜಿರೆ ಸಿದ್ಧವನ ರುಡ್‍ಸೆಟ್ ಆವರಣದಲ್ಲಿರುವ ರುಡ್‍ಸೆಟ್ ಆಡಳಿತ ಕಚೇರಿಯ ವಿಸ್ತೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ತರಬೇತಿ ನೀಡುವ ಮೂಲಕ ರುಡ್‍ಸೆಟ್ ಲಕ್ಷಾಂತರ ಮಂದಿಗೆ ಸ್ವ-ಉದ್ಯೋಗ ಮಾಡುವಂತೆ ಮಾಡುವಲ್ಲಿ ಸಫಲವಾಗಿ. ಆರಂಭದ ದಿನಗಳಲ್ಲಿ ತರಕಬೇತಿ ಪಡೆದು ಇಂದು ಉದ್ಯಮಿಗಳಾಗಿ ಬೆಳೆದಿದ್ದಾರೆ. ಇಂದು ಸರಕಾರದ ಮಾನ್ಯತೆ ಪಡೆದು ಉದ್ಯೋಗ ಸೃಷ್ಟಿ ನಡೆಯುತ್ತಿದೆ. ಮಹಿಳೆಯರೂ ಇಂದು ಬ್ಯೂಟಿ ಪಾರ್ಲರ್, ಟೈಲರಿಂಗ್ ಮೊದಲಾದ ತರಬೇತಿಗಳನ್ನು ಅತೀ ಕಡಿಮೆ ಅವಧಿಯಲ್ಲಿ ಪಡೆದು ಉತ್ತಮ ರೀತಿಯ ಜೀವನ ಸಾಗಿಸುತ್ತಿದ್ದಾರೆ. ಮಹಿಳೆಯರು ನಿರುದ್ಯೋಗಿಗಳಲ್ಲ, ಅವರಿಗೆ ಮನೆಯಲ್ಲಿಯೇ ಕೆಲಸಗಳು ಕುಟುಂಬ ನಿರ್ವಹಣಾ ಕಾರ್ಯಗಳು ಇರುತ್ತವೆ. ಇಂದು ಬದಲಾದ ಜಗತ್ತಿಗೆ ತಕ್ಕಂತೆ ತಮ್ಮ ಕೌಶಲ್ಯ ವೃದ್ಧಿಸಿಕೊಂಡು ಸ್ವ-ಉದ್ಯೋಗ ಮಾಡುವ ಮೂಲಕ ತಮ್ಮ ಸಂಸಾರದ ಖರ್ಚು ನಿಭಾಯಿಸಲು ಸಹಕರಿಸುತ್ತಾರೆ ಎಂದರು.
ಕೆನರಾ ಬ್ಯಾಂಕ್ ವಿಭಾಗೀಯ ನಿರ್ದೇಶಕಿ ಎ.ಮಣಿಮೇಖಲೈ, ಕೆನರಾ ಬ್ಯಾಂಕ್ ಬೆಂಗಳೂರು ಕಚೇರಿಯ ಜನರಲ್ ಮ್ಯಾನೇಜರ್ ರಾಕೇಶ್ ಕಶ್ಯಪ್, ಮಂಗಳೂರು ಕಚೇರಿ ಜನರಲ್ ಮ್ಯಾನೇಜರ್ ಬಿ. ಯೋಗೀಶ್ ಆಚಾರ್ಯ, ಅಧಿಕಾರಿಗಳಾದ ಸತ್ಯಮೂರ್ತಿ, ಬಿಪುಲ್‍ಚಂದ್ರ ಸಾಹ, ರುಡ್‍ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ್, ನಿರ್ದೇಶಕ ಪಡದಯ್ಯ ಸಿ. ಹಿರೇಮಠ್, ಹಿರಿಯ ತರಬೇತುದಾರರಾದ ಜೇಮ್ಸ್ ಅಬ್ರಹಾಂ, ಅನಸೂಯಾ, ಸಂಸ್ಥೆಯ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

error: Content is protected !!