ಎಸ್.ಕೆ.ಡಿ.ಆರ್.ಡಿ.ಪಿ. ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಅವರಿಗೆ ಬೀಳ್ಕೊಡುಗೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಳೆದ ೩೯ ವರ್ಷಗಳಿಂದ ಸೇವೆಯನ್ನು ಸಲ್ಲಿಸಿ ಸೇವಾ ವಯೋ ನಿವೃತ್ತಿ ಹೊಂದಿದ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಯೋಜನೆಯ ಕೇಂದ್ರ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಿ, ಸನ್ಮಾನಿಸಿದರು.

ಸನ್ಮಾನಿಸಿ ಮಾತನಾಡಿದ ಡಾ. ಹೆಗ್ಗಡೆಯವರು, 1982ರಲ್ಲಿ ಶ್ರ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಕಡು ಬಡತನದಲ್ಲಿರುವ ಕುಟುಂಬಗಳ ಅಭಿವೃದ್ಧಿ ಪಡಿಸಲು ಸಹಾಯ, ಸಹಕಾರ ನೀಡಲು, ಸಂಪರ್ಕ ಮಾಡಲು ಪ್ರಥಮದಲ್ಲಿ ಮುಂದೆ ಬಂದಂತಹ ಕಾರ್ಯಕರ್ತ ಎ.ಶ್ರೀಹರಿ ಆಗಿದ್ದಾರೆ. ಆ ಸಂದರ್ಭದಲ್ಲಿ ಯೋಜನೆಯನ್ನು ಯಾವ ರೀತಿ ಮುಂದುವರೆಸಬೇಕು ಎಂಬುವುದರ ಕುರಿತು ಯೋಜನೆ ಯಾರಲ್ಲೂ ಬಂದಿರುವುದಿಲ್ಲ. ತದ ನಂತರ ಬೆಳ್ತಂಗಡಿ ತಾಲೂಕಿಗೆ ಬೇರೆ ಬೇರೆ ಕಾರ್ಯಕರ್ತರನ್ನು ತೆಗೆದುಕೊಂಡು ಅವರ ಸೇವೆಯಿಂದ ಪ್ರಸ್ತುತ ಸಂಸ್ಥೆ ಅತೀ ದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿ ಬೆಳೆಯಲು ಸಹಕಾರಿಯಾಗಿದೆ ಎಂದ ಅವರು, ಶ್ರೀಹರಿಯವರ ಹಾಗೂ ಎಲ್ಲಾ ಕಾರ್ಯಕರ್ತರ ಕೆಲಸ ಸಾಧನೆಯ ಕುರಿತು ಡಾ. ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನೆಯ ಕಾರ್ಯನಿರ್ವಾಹಕಾ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಅವರು, ಯೋಜನೆಯ ಪ್ರಥಮ ಕಾರ್ಯಕರ್ತ ಎ.ಶೀಹರಿ ಆಗಿದ್ದಾರೆ. ಪ್ರಥಮದಲ್ಲಿ ಡಾ.ಹೆಗ್ಗಡೆಯವರ ಆಶಯವನ್ನು ನೇರವಾಗಿ ಕಾರ್ಯಕರ್ತರಿಗೆ ಮತ್ತು ಬೆಳ್ತಂಗಡಿ ತಾಲೂಕಿನ ಕುಟುಂಬಗಳಿಗೆ ತಿಳಿಸುವುದು, ಕುಟುಂಬಗಳ ಕೃಷಿ ಮತ್ತು ಕೃಷಿಯೇತರ ಅಭಿವೃದ್ಧಿಗೆ ಸಹಾಯ ನೀಡಿ ಮಾರ್ಗದರ್ಶನ ನೀಡುವುದು, ಅಭಿವೃದ್ಧಿಗೆ ಪೂರಕವಾಗಿ ಬೇರೆ ಬೇರೆ ಹಂತದ ತರಬೇತಿ ನೀಡಿ ತಾಲೂಕಿನಲ್ಲಿ ಯೋಜನೆ ಉತ್ತಮವಾಗಿ ಬೆಳೆಯಲು ಹಗಲಿರುಳು ಶ್ರಮ ಪಟ್ಟಿದ್ದಾರೆ. ಬಳಿಕ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕರಾಗಿ ಅನೇಕ ಮಹಿಳೆಯರಿಗೆ ಸ್ವ-ಉದ್ಯೋಗವನ್ನು ಕಲ್ಪಿಸಿ ಸಿರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಪುತ್ತೂರು ತಾಲೂಕಿನ ನಿರ್ದೇಶಕರಾಗಿ, ಕೊಡಗು ಜಿಲ್ಲೆಯ ಜಿಲ್ಲಾ ನಿರ್ದೇಶಕರಾಗಿ ಉತ್ತಮವಾದ ಸೇವೆಯನ್ನು ಸಲ್ಲಿಸಿ, 2012ರಿಂದ ಮೈಸೂರು ಪ್ರಾದೇಶಿಕ ನಿರ್ದೇಶಕರಾಗಿ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಸೇವೆಯನ್ನು ಸಲ್ಲಿಸಿ, 2019 ರಿಂದ ಕೇಂದ್ರ ಕಛೇರಿ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ, ಇದೀಗ ಸೇವಾ ವಯೋ ನಿವೃತ್ತಿ ಹೊಂದಿದ್ದಾರೆ.

ಯೋಜನೆಯ ಕೃಷಿ ಮೇಳದ ನಿರ್ವಹಣೆ ಜವಾಬ್ದಾರಿ, ಜನಜಾಗೃತಿ ಕಾರ್ಯಕ್ರಮ ಅನುಷ್ಠಾನ, ಕೃಷಿ ವಿಸ್ತರಣಾ ಕಾರ್ಯಕ್ರಮದ ಉಸ್ತುವಾರಿ ಇತ್ಯಾದಿ ಮಹತ್ತರವಾದ ಜವಾಬ್ದಾರಿಯನ್ನು ಶ್ರೀಹರಿಯವರು ನಿರ್ವಹಣೆ ಮಾಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಯೋಜನೆಯ ಅಧ್ಯಕ್ಷರಾದ ಡಾ.ಹೆಗ್ಗಡೆಯವರ ಆಶಯವನ್ನು ರಾಜ್ಯಾದ್ಯಂತ ತಲುಪಿಸುವಲ್ಲಿ ಅತ್ತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಹಣಕಾಸು ಪ್ರಾದೇಶಿಕ ನಿರ್ದೇಶಕ ಶಾಂತರಾಮ ಆರ್. ಪೈ ಮತ್ತು ಸ್ವ-ಸಹಾಯ ಸಂಘಗಳ ನಿರ್ವಹಣಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಯೋಜನೆಯ ಮುಖ್ಯನಿರ್ವಾಹಣಾಧಿಕಾರಿ ಎಸ್.ಎಸ್.ಅನಿಲ್ ಕುಮಾರ್, ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಶ್ಯಾಮಲ ಶ್ರೀಹರಿ, ಕೇಂದ್ರ ಕಛೇರಿಯ ನಿರ್ದೇಶಕರು, ಯೋಜನಾಧಿಕಾರಿಯವರು, ಪ್ರಬಂಧಕರು, ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣರವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್ ಸ್ವಾಗತಿಸಿ, ಶುದ್ಧಗಂಗಾ-ಕೆರೆ ವಿಭಾಗದ ನಿರ್ದೇಶಕ ಲಕ್ಷ್ಮಣ್ ಎಂ. ವಂದಿಸಿದರು. ಪ್ರಗತಿ ರಕ್ಷಾ ಕವಚದ ಯೋಜನಾಧಿಕಾರಿ ಬಾಲಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು.

error: Content is protected !!