ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: ಗ್ರಾಮ, ಬೂತ್ ಸಮಿತಿ ಪದಾಧಿಕಾರಿಗಳ ಐಕ್ಯತಾ ಸಮಾವೇಶ

ಬೆಳ್ತಂಗಡಿ: ನೆರಿಯ ಗ್ರಾಮದ ಬಯಲು ಅಂಕೋತ್ಯಾರು ಇಸುಬು ಅವರ ಮನೆ ವಠಾರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬ್ಲಾಕ್ ಸಮಿತಿ ಬೆಳ್ತಂಗಡಿ (ಗ್ರಾಮೀಣ) ಗ್ರಾಮ ಸಮಿತಿ ನೆರಿಯ ಇದರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಪದಾಧಿಕಾರಿಗಳ ಐಕ್ಯತಾ ಸಮಾವೇಶ ನಡೆಯಿತು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ ಗೌಡ ಅವರ ಅಧ್ಯಕ್ಷತೆ‌ ವಹಿಸಿದ್ದರು.
ಕಾರ್ಯಕ್ರಮವನ್ನು ಮಾಜಿ ಸಚಿವ ಕೆ ಗಂಗಾಧರ ಗೌಡ ಉದ್ಘಾಟಿಸಿ ಮಾತನಾಡಿ, ಪಕ್ಷ ಸಂಘಟನೆ ನಡೆಸಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.
ಕೆ.ಪಿ.ಸಿ.ಸಿ ಸಂಯೋಜಕ ಕೃಷ್ಣಮೂರ್ತಿ, ಗ್ರಾ.ಪಂ. ಚುನಾವಣೆ, ಬೂತ್ ಸಮಿತಿ ರಚನೆ ಹಾಗೂ ಕಾರ್ಯ ವೈಖರಿ ಕುರಿತು ಮಾಹಿತಿ ನೀಡಿದರು.
ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ನಮಿತಾ.ಕೆ., ದ. ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ. ಸಿ. ಮ್ಯಾಥ್ಯು, ತಾ. ಪಂ. ಸದಸ್ಯರಾದ ವಿ.ಟಿ. ಸೆಬಾಸ್ಟಿನ್, ಪ್ರವೀಣ್ ಗೌಡ, ಎ.ಪಿ.ಎಂ.ಸಿ ಸದಸ್ಯ ಅಬ್ದುಲ್ ಗಪೂರ್, ಕೆ.ಪಿ.ಸಿ.ಸಿ. ಕಾರ್ಮಿಕ ಘಟಕ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಪಡ್ಪು, ನೆರಿಯ ‌ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮಕೃಷ್ಣ ಗೌಡ, ನೆರಿಯ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ರಾಮ್ ಕುಮಾರ್ ಬಿ., ಮುಂಡಾಜೆ ಸಿ. ಎ. ಬ್ಯಾಂಕ್ ನಿರ್ದೇಶಕ ಸಂಜೀವ ಗೌಡ ಎಂ., ನಂದಕುಮಾರ್ ಎ., ನೆರಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಿ. ಮಹಮ್ಮದ್, ಪಿ. ಕೆ. ರಾಜನ್, ನಾರಾಯಣ ಆಚಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಯಾನಂದ, ಪ್ರವೀಣ್, ಸಾಮಾಜಿಕ ಜಾಲತಾಣದ ಸಂಚಾಲಕ ಇಸುಬು, ಐದು ಬೂತ್ ಸಮಿತಿಗಳ ಅಧ್ಯಕ್ಷರಾದ ಸಿನೋಜ್ ಎಂ. ಎ., ಎ.ನಂದಕುಮಾರ್ , ಸುಧಾಕರ್, ಕೇಶವ ಪೂಜಾರಿ, ತೋಮಸ್ ವಿ. ಡಿ ಮತ್ತು ಪದಾಧಿಕಾರಿಗಳು ಇದ್ದರು. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ (ಗ್ರಾಮೀಣ) ಅಧ್ಯಕ್ಷ ಬಿ. ಅಶ್ರಫ್ ನೆರಿಯ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನೆರಿಯ ಗ್ರಾಮ ಸಮಿತಿ ಅಧ್ಯಕ್ಷ ಎಂ. ಜೆ. ಸೆಬಾಸ್ಟಿನ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಅಲಂಗಾಯಿ ವಂದಿಸಿದರು.‌ ಸಾಮಾಜಿಕ ಜಾಲತಾಣದ ಸಂಚಾಲಕ ಮಹಮ್ಮದ್ ಶರೀಫ್ ಎ.ಕೆ. ನಿರೂಪಿಸಿದರು.

error: Content is protected !!