ಫೆ.14ರಂದು ಡಾರ್ಲಿಂಗ್ ಕೃಷ್ಣಾ, ಮಿಲನಾ ನಾಗರಾಜ್ ವಿವಾಹ

ಬೆಂಗಳೂರು: ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ವಿವಾಹ ಫೆ.14ರಂದು ನಡೆಯಲಿದೆ. ತಾವಿಬ್ಬರೂ 2021ರ ಫೆ.14ರಂದು ಮದ್ವೆ ಆಗೋದಾಗಿ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ ಪ್ರಥಮ ಚಿತ್ರ ಲವ್ ಮಾಕ್‍ಟೈಲ್ ಬಿಡುಗಡೆ ಸಂದರ್ಭ ಇವರಿಬ್ಬರೂ ಜೋಡಿ ಹಕ್ಕಿಗಳೆಂದು ಜಗತ್ತಿಗೆ ತಿಳಿದಿತ್ತು. ಇದೀಗ ತಮ್ಮ ಲವ್ ರಿಲೇಶನ್‍ಶಿಪ್‍ಗೆ ಮದುವೆಯ ಮುದ್ರೆಯೊತ್ತುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿಂದೆ ಚಾರ್ಲಿ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು.


ಕೃಷ್ಣಾ ಅವರು ಈ ಹಿಂದೆ ಮದರಂಗಿ, ಚಾರ್ಲಿ, ಜಾನ್ ಜಾನಿ ಜನಾರ್ಧನ್, ಮುಬೈ, ಹುಚ್ಚ-2 ಮೊದಲ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದರು. ಹುಡುಗರು, ರುದ್ರತಾಂಡವ, ಜಾಕಿ ಮೊದಲಾದ ಚಿತ್ರಗಳಲ್ಲಿ ಅತಿಥಿ ಕಲಾವಿದರಾಗಿಯೂ ಕಾಣಿಸಿಕೊಂಡಿದ್ದರು. ಲವ್ ಮಾಕ್‍ಟೈಲ್ ಚಿತ್ರದ ಬಿಗ್ ಸಕ್ಸಸ್‍ನಿಂದ ಪ್ರೇರೇಪಣೆಗೊಂಡು ಅದರ ಸೀಕ್ವೆಲ್ ನಿರ್ಮಾಣದ ಜೊತೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನು ಮಿಲನ ನಾಗರಾಜ್ ಅವರು ನಮ್ ದುನಿಯಾ ನಮ್ ಸ್ಟೈಲ್, ಬೃಂ ದಾವನ, ಮತ್ತೆ ಉದ್ಭವ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

error: Content is protected !!