ಸಂಘ ಸಂಸ್ಥೆಗಳ ಸಹಕಾರ ಸಮಾಜದ ಪ್ರಗತಿಗೆ ಪ್ರಮುಖ ಪಾತ್ರ ವಹಿಸುತ್ತದೆ, ಶಾಸಕ ಹರೀಶ್ ಪೂಂಜ

           

ಚಾರ್ಮಾಡಿ: ಸಂಘ ಸಂಸ್ಥೆಗಳು ನೀಡುವ ಸಹಕಾರವು ಸಮಾಜದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಇಂದು ಹಲವಾರು ಸಂಸ್ಥೆಗಳು ಸಮಾಜ ಮುಖಿ ಕಾರ್ಯಗಳಿಗೆ ಕೈ ಜೋಡಿಸಿರುವುದು ಪ್ರಗತಿಯ ವೇಗಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಬುಧವಾರ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಕಳೆದ ವರ್ಷದ ಭೀಕರ ಪ್ರವಾಹಕ್ಕೆ ಮನೆ ಕಳೆದು ಕೊಂಡಿದ್ದ ಕಮಲಾ ಅವರಿಗೆ ಮಂಗಳೂರಿನ ಕ್ರೆಡಾಯ್ ಹಾಗೂ ಗಾರ್ಡಿಯನ್ ಬಿಲ್ಡರ್ಸ್ ರವರು ಉಚಿತವಾಗಿ ನಿರ್ಮಿಸಿ ಕೊಟ್ಟ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.

ಕ್ರೆಡಾಯ್ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ಕರ್ಡೋಜ,ಗಾರ್ಡಿಯನ್ ಬಿಲ್ಡರ್ಸ್ ಮಾಲಕರಾದ ಗಣೇಶ್ ಎಂ. ಪಿ. ಹಾಗೂ ಕೇಶವ ಕೆ.,ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ,ಎಸ್. ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲು ಉಪಸ್ಥಿತರಿದ್ದರು

ಭಿಡೆ ಮೆಡಿಕಲ್ಸ್ ಮಾಲಕ ಸುಜಿತ್ ಭಿಡೆ ಕಾರ್ಯಕ್ರಮ ಸಂಯೋಜಿಸಿದರು.

error: Content is protected !!