ಧರ್ಮಸ್ಥಳದಲ್ಲಿ ಯಾಂತ್ರೀಕೃತ-ಸಾಂಪ್ರಾದಾಯಿಕ ಭತ್ತದ ಬೇಸಾಯ ಕಟಾವು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ , ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ಇದರ ವತಿಯಿಂದ ಕ್ಷೇತ್ರದ ಭತ್ತದ ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ಭತ್ತದ ಬೇಸಾಯ ವಿಧಾನಗಳನ್ನು ಅಳವಡಿಸಿ, ಅಧ್ಯಯನ ನಡೆಸಿ, ಅನುಷ್ಠಾನಗೊಳಿಸಿದ ಕ್ಷೇತ್ರದ ದೇವಳದ ಹಿಂಭಾಗದ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯವನ್ನು ಬುಧವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಧರ್ಮಸ್ಥಳ ದ ಡಿ.ಹರ್ಷೇಂದ್ರ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಯಂತ್ರಶ್ರೀ (ಸಿ ಎಚ್ ಎಸ್ ಸಿ) ಯೋಜನಾಧಿಕಾರಿ ಸುಧೀರ್ ಜೈನ್, ಪ್ರಬಂಧಕ ಸಚಿನ್, ಕೇಂದ್ರ ಕಚೇರಿ ಯೋಜನಾಧಿಕಾರಿ ಸುದರ್ಶನ್, ಕೃಷಿ ವಿಭಾಗ ಮೇಲ್ವಿಚಾರಕ ಹರಿಪ್ರಸಾದ್, ವಲಯ ಮೇಲ್ವಿಚಾರಕ ಪ್ರಶಾಂತ್, ಕ್ಷೇತ್ರದ ತೋಟಗಾರಿಕ ಮೇಲ್ವಿಚಾರಕ ರಾಜೇಂದ್ರ ರೈ, ಒಕ್ಕೂಟದ ಅಧ್ಯಕ್ಷೆ ಶಾಂತ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

error: Content is protected !!