ಕ್ವಾಲಿಸ್‌ ವಾಹನದ ಟಯರ್ ಸಿಡಿದು ಅಪಘಾತ: ವ್ಯಕ್ತಿ ಸಾವು

ನಾರಾವಿ: ಕುತ್ಲೂರು ಸಮೀಪದ ಕುಕ್ಕುಜೆ ಎಂಬಲ್ಲಿ ಕ್ವಾಲಿಸ್ ವಾಹನವೊಂದರ ಟಯರ್ ಸಿಡಿದು ಪಲ್ಟಿಯಾಗಿ ಒರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಕೋಲಾರದ ನರಸಾಪುರದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕ್ವಾಲಿಸ್ ವಾಹನದ ಟಯರ್ ಸಿಡಿದು, ವಾಹನ ಪಲ್ಟಿಯಾಗಿದ್ದು ಅದರಲ್ಲಿದ್ದ ರಾಕೇಶ್ ಹಾಗೂ ಮೋಹನ್ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಸ್ಥಳೀಯರ ನೆರವಿನಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಅದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ರಾಕೇಶ್( 24) ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

error: Content is protected !!