ಕರ್ನಾಟಕ ಮುಸ್ಲಿಂ ಜಮಾತ್: ಕಳಿಯ ಗ್ರಾಮ ಸಮಿತಿ ರಚನೆ

ಗೇರುಕಟ್ಟೆ: ಕರ್ನಾಟಕ ಮುಸ್ಲಿಂ ಜಮಾತ್ ನ ಕುವೆಟ್ಟು ಬ್ಲಾಕ್ ಸಮಿತಿಯ ಕಳಿಯ ಗ್ರಾಮ ಸಮಿತಿಯನ್ನು ಗೇರುಕಟ್ಟೆ ಮನ್ಶರ್ ಸಂಸ್ಥೆಯ ಸಭಾಂಗಣದಲ್ಲಿ ನಡೆಸಲಾಯಿತು.

ಜಮಾಲುದ್ದೀನ್ ಲತೀಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಸ್ಮಾನ್ ಆಳಂದಿಲ ವಹಿಸಿದ್ದರು.
ಸಮಿತಿಯ ಅಧ್ಯಕ್ಷರಾಗಿ ಸೈಫುಲ್ಲ ಎಚ್. ಎಸ್., ಉಪಾಧ್ಯಕ್ಷರಾಗಿ ಜಿ. ಡಿ. ಹಮೀದ್, ಮಹಮ್ಮದ್ ಗೇರುಕಟ್ಟೆ, ಅಬ್ದುಲ್ ಖಾದರ್ ಬಟ್ಟೆಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ . ಜಿ., ಎಚ್. ಕೋಶಾಧಿಕಾರಿಯಾಗಿ ಮಹಮ್ಮದ್ ಹನೀಫ್. ಬಿ. ಐ., ಸಂಘಟನಾ ಕಾರ್ಯದರ್ಶಿಯಾಗಿ ಹಾರಿಶ್ ಪರಪ್ಪು, ಜೊತೆ ಕಾರ್ಯದರ್ಶಿಗಳಾಗಿ ನಜಿರ್ ಎರುಕಡಪ್ಪು, ಅಶ್ರಫ್ ಬಟ್ಟೆಮಾರ್, ಫಯಾಜ್. ಕೆ. ಎಮ್. ಹಾಗೂ ಸಾಮಾಜಿಕ ಜಾಲತಾಣದ ನಿರ್ವಾಹಕರಾಗಿ ರಹಿಮಾನ್ ಮಾಸ್ಟರ್ ಆಯ್ಕೆಯಾದರು.
ಸಭೆಯಲ್ಲಿ ಎ. ಕೆ.ಅಹ್ಮದ್, ರಾಝಿಯುದ್ದೀನ್ ಮದ್ದಡ್ಕ, ಎಂ. ಎಚ್. ಅಬೂಬಕ್ಕರ್, ಅಬ್ದುಲ್ ಅಝೀಜ್ ಮದನಿ ಉಪಸ್ಥಿತರಿದ್ದರು.
ಕೆ. ಎಮ್. ಅಬ್ದುಲ್ ಕರೀಂ ಗೇರುಕಟ್ಟೆ ಸ್ವಾಗತಿಸಿ, ಕೊನೆಯಲ್ಲಿ ಹ್ಯಾರಿಸ್ ಪರಪ್ಪು ವಂದಿಸಿದರು.

error: Content is protected !!