ಬೆಳ್ತಂಗಡಿ: ಉಜಿರೆಯ ಡಾ. ರಾಘವೇಂದ್ರ ಹೊಳ್ಳ ಅವರು ಭೌತಶಾಸ್ತ್ರ ವಿಭಾಗದಲ್ಲಿ “ಇನ್ವೆಸ್ಟಿಗೇಷನ್ ಆಫ್ ಟೆಕ್ನಿಕಲ್ ಅಂಡ್ ಡೋಸಿಮೆಟ್ರಿಕ್ ಆಸ್ಪೆಕ್ಟ್ಸ್ ಆಫ್ ರೆಸ್ಪಿರೇಟರಿ ಮೋಷನ್ ಅಂಡ್ ಎ ನ್ಯೂ ಫಿಲ್ಮ್ ಸ್ಲೋಪ್ ಮೆಥಡ್ ಫಾರ್ ಸ್ಮಾಲ್ ಫೀಲ್ಡ್ ಡೋಸಿಮೆಟ್ರಿ” ಎಂಬ ವಿಷಯದ ಕುರಿತು ಸಂಶೋಧನೆ ಕೈಗೊಂಡು ಸಲ್ಲಿಸಿದ ಸಂಪ್ರಬಂಧವನ್ನು ಮನ್ನಿಸಿ ಕೊಯಂಬತ್ತೂರಿನ ಕಾರುಣ್ಯ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಪದವಿ ಹಾಗೂ ಮುಂಬಯಿಯ ಹೋಮಿ ಬಾಬಾ ನ್ಯಾಷನಲ್ ಇನ್ಸ್ಟಿಟ್ಯೂಟ್‌ನಿಂದ ಸ್ನಾತಕ್ಕೋತ್ತರ ಡಿಪ್ಲೊಮಾವನ್ನು ಪಡೆದಿರುತ್ತಾರೆ. ಪ್ರಕೃತ ಪೂನಾದ ‘ರೂಬಿ ಹಾಲ್ ಕ್ಲಿನಿಕ್’ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಡೆಪ್ಯುಟಿ ಚೀಫ್ ಮೆಡಿಕಲ್ ಫಿಸಿಸಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ರಾಘವೇಂದ್ರ ಹೊಳ್ಳರವರು ಉಜಿರೆಯ ಶ್ರೀನಿವಾಸ ಹೊಳ್ಳ ಮತ್ತು ಮೂಕಾಂಬಿಕಾ ಹೊಳ್ಳ ದಂಪತಿಯ ಪುತ್ರ.