ರಾಜಕೇಸರಿ ಸವಣಾಲು ಸಮಿತಿಯಿಂದ ಸಹಾಯಹಸ್ತ

ಸವಣಾಲು: ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಡ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕೂಲಿ ಕಾರ್ಮಿಕರನ್ನೊಳಗೊಂಡ ಅಖಿಲ ಕರ್ನಾಟಕ ರಾಜಕೇಸರಿ ಸವಣಾಲು ಸಮಿತಿ,  ರಾಜಕೇಸರಿ ಸ್ಥಾಪಕಾಧ್ಯಕ್ಷ ದೀಪಕ್. ಜಿ. ಮಾರ್ಗದರ್ಶನದಂತೆ ಸಹಾಯಹಸ್ತ ಚಾಚಿದೆ.

ಸವಣಾಲು ಸಮೀಪದ ಹಿರಿಯಾಜೆ ಶ್ರೀಕಾಂತ್ ಎಂಬವರು ಕಣ್ಣಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿದಾಗ ಅವರಿಗೆ ಕೊರೊನಾ ಪಾಸಿಟಿವ್ ಧೃಢ ಪಟ್ಟ ಹಿನ್ನಲೆಯಲ್ಲಿ ಕಡುಬಡತನದಲ್ಲಿರುವ ಇವರ ಮನೆಗೆ ರಾಜಕೇಸರಿ ಸವಣಾಲು ಸಮಿತಿ ಭೇಟಿ ನೀಡಿ, ಮನೆಗೆ ಬೇಕಾದ ಅಕ್ಕಿ ಹಾಗೂ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡಿ ದೈರ್ಯ ತುಂಬಿದರು.

ಈ ಸಂದರ್ಭದಲ್ಲಿ ರಾಜಕೇಸರಿ ಸವಣಾಲು ಘಟಕದ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಕಾರ್ಯದರ್ಶಿ ಯೋಗೀಶ್ , ಸಾಮಾಜಿಕ ಜಾಲತಾಣದ ಸಂಕೇತ್ ಹಾಗೂ ಸದಸ್ಯರಾದ ವಕೀಲ ಕಿರಣ್, ರೂಪೇಶ್, ಸದಾಶಿವ, ಪ್ರವೀಣ್ ಇನ್ನಿತರರು ಉಪಸ್ಥಿತರಿದ್ದರು.

error: Content is protected !!