ಅಡಿಕೆ ಬೆಳೆಗಾರರಿಗೆ ಎಕರೆಗೆ 1 ಲಕ್ಷ ರೂ. ಸಾಲ: ಡಾ. ರಾಜೇಂದ್ರ ಕುಮಾರ್


ಅಳದಂಗಡಿ: ಅಡಿಕೆ ಧಾರಣೆ ಹಾಗೂ ರಬ್ಬರ್ ಧಾರಣೆ ಏರುಗತಿಯಲ್ಲಿರುವುದು ಉತ್ತಮ ವಿಚಾರ. ಅಡಿಕೆ ಬೆಳೆಗಾರರಿಗೆ ಕೃಷಿ ಅಭಿವೃದ್ಧಿಗೆ ಎಕರೆಗೆ ರೂ. 80 ಸಾವಿರದಿಂದ ಒಂದು ಲಕ್ಷ ರೂ. ಗೆ ಸಾಲದ ಮೊತ್ತವನ್ನು ನೀಡಲಾಗುವುದು ಎಂದು
ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.‌ಎನ್. ರಾಜೇಂದ್ರ ಕುಮಾರ್,
ಅವರು ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಭಾ ಕಾರ್ಯಕ್ರಮ ಅಳದಂಗಡಿ ಶ್ರೀ ಗುರು ಸಭಾಭವನದಲ್ಲಿ ಮಾತನಾಡಿದರು.
10 ಲಕ್ಷ ರೂ.ವರೆಗೆ 3ಶೇ. ಬಡ್ಡಿಯಲ್ಲಿ ಸಾಲ ನೀಡಲಾಗುವುದು.‌ಅಳದಂಗಡಿಲ್ಲಿ‌ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಿಸಲು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.


37 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಪಿ.ಹೆಚ್. ನಿತ್ಯಾನಂದ ಶೆಟ್ಟಿ ನೊಚ್ಚ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ನಡೆಯಿತು.‌ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು.
ಅಳದಂಗಡಿಯ ತಿಮ್ಮಣ್ಣ ಅರಸರಾದ ಡಾ. ಪದ್ಮಪ್ರಸಾದ ಅಜಿಲ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ‌

error: Content is protected !!