ತೋಟತ್ತಾಡಿ ಧರ್ಮರಕ್ಷಾ ವೇದಿಕೆಯಿಂದ ಶ್ರೀಶಾರದೋತ್ಸವ

ಬೆಳ್ತಂಗಡಿ: ಧರ್ಮರಕ್ಷಾ ವೇದಿಕೆ ತೋಟತ್ತಾಡಿ ವತಿಯಿಂದ 4 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಪೂಜೆ ಕಾರ್ಯಕ್ರಮವು ತೋಟತ್ತಾಡಿಯ
ಶ್ರೀ ನಾರಾಯಣ ಗುರು ಧರ್ಮ ಪರಿಪಾವಲನ ಯೋಗಂ ವಠಾರದಲ್ಲಿ ನಡೆಯಿತು.‌

ಶ್ರೀ ದೇವರ ಮೂರ್ತಿ ಪ್ರತಿಷ್ಠೆ ಬಳಿಕ ಭಜನಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ನಮಿತಾ ಕೆ. ಉದ್ಘಾಟಿಸಿದರು.

ಧರ್ಮ ರಕ್ಷಾ ವೇದಿಕೆ ಅಧ್ಯಕ್ಷ ಪ್ರಸಾದ್ ಮಡಿಯೂರು, ಮಾಜಿ ಸೈನಿಕ ಶಿವದಾಸನ್ ಪಾಲೆತ್ತಾಡಿ, ತಾ.ಪಂ. ಸದಸ್ಯ ಕೋರಗಪ್ಪ ಗೌಡ, ಅಭಿನಂದನ್ ಹರೀಶ್ ಕುಮಾರ್, ಗ್ರಾ. ಪಂ. ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಮಾಜಿ ಸದಸ್ಯ ಓಬಯ್ಯ ಗೌಡ ಬಾಯ್ತ್ಯಾರು, ಧರ್ಮ ಜಾಗರಣದ ಪ್ರಮುಖ್ ದಿನಕರ ಅದೇಲು, ತೀಕ್ಷಿತ್ ದಿಡುಪೆ, ಎಸ್ ಎನ್ ಡಿ ಪಿ ಮಹಿಳಾ ಸಂಘದ ಅಧ್ಯಕ್ಷೆ ಲತಾ ಹಾಗೂ ಧರ್ಮರಕ್ಷಾ ವೇದಿಕೆ ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಜೆ ಶ್ರೀ ದೇವರ ಮೂರ್ತಿಯ ವೈಭವದ ಶೋಭಾಯಾತ್ರೆ ನಡೆಸಲಾಯಿತು.

error: Content is protected !!