ಕಣಿಯೂರು ಮಹಾಮ್ಮಾಯಿ ಮಂದಿರದಲ್ಲಿ ನವರಾತ್ರಿ ಪೂಜೆ

 

ಕಣಿಯೂರು: ಕಣಿಯೂರು ಶಿವಾಜಿನಗರದ ಶ್ರೀ ಮಹಾಮ್ಮಾಯಿ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಜರುಗಿತು. ಸರಳವಾಗಿ ಉತ್ಸವವನ್ನು ಆಚರಿಸಲಾಯಿತು. ದೇವಸ್ಥಾನದ ದರ್ಶನ ಪಾತ್ರಿ ಶ್ರೀ ಬೊಮ್ಮಣ್ಣ ನಾಯ್ಕ ಮಾಚಾರು ಇವರ ನೇತೃತ್ವದಲ್ಲಿ ಬೆಳಗ್ಗೆ ತೆನೆ ತುಂಬಿಸುವ ಮೂಲಕ ಪೂಜಾ ಕಾರ್ಯಕ್ರಮಗಳ ಪ್ರಾರಂಭವಾಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪುತ್ತು ನಾಯ್ಕ ಕುಡುವಂತಿ, ಅಧ್ಯಕ್ಷರಾದ ಬಾಬು ನಾಯ್ಕ ಮೈಪಾಜೆ, ಪೂಜಾ ಸಮಿತಿಯಿಂದ ಅಧ್ಯಕ್ಷರಾದ ಕೃಷ್ಣ ನಾಯ್ಕ ಒಳಬ್ಬಾವು, ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು, ಉಪಸ್ಥಿತರಿದ್ದರು.

error: Content is protected !!