ನಿವೃತ್ತ ‌ಶಿಕ್ಷಕ ನಾಪತ್ತೆ

ಬೆಳ್ತಂಗಡಿ: ಉಜಿರೆಯ ನಿವೃತ್ತ ಶಿಕ್ಷಕರೊಬ್ಬರು ನಾಪತ್ತೆಯಾದ ಘಟನೆ ಅ.22 ರಂದು ನಡೆದಿದೆ.
ಉಜಿರೆ ಜನಾರ್ದನ ಶಾಲೆ ಸಮೀಪದ ಪ್ರಸನ್ನ ಕುಮಾರ್ (65) ಬೆಳಿಗ್ಗೆ ಹಾಲು ತರಲೆಂದು ತನ್ನ ಬೈಕ್ ನಲ್ಲಿ ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ರಾಜಶ್ರೀ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!