ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

 

ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘ ತಾಲೂಕು ಸಮಿತಿ ‌ಬೆಳ್ತಂಗಡಿ ಹಾಗೂ ಇದರ ಅಶ್ರಯದಲ್ಲಿ
ನೊಂದಣಿಯಾದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ
ಹಾಗೂ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಶಿಬಿರ ಶುಕ್ರವಾರ ಗೇರುಕಟ್ಟೆ ಕಳಿಯ ಸಹಕಾರಿ ಭವನ ಸಭಾಂಗಣದಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು, ಸಾಮಾನ್ಯ ವ್ಯಕ್ತಿಯು ಸಮಾಜದ ಕಾರ್ಯ ಮಾಡಿದಾಗ ಅಸಾಮಾನ್ಯನೆಸಿಕೊಳ್ಳುವನು.ಅದಕ್ಕಾಗಿ ಸಮಯದ ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ಜೀವನ ಅರ್ಥಪೂರ್ಣವಾಗುವುದು.
ಇಂದು ನಮ್ಮ ಹಳ್ಳಿಯಲ್ಲಿ ಬೆಳೆದ ಅನೇಕರು ಸಾವಿರಾರು ಜನರಿಗೆ ಉದ್ಯೋಗ ಕೊಡುವ ಉದ್ಯೋಗಪತಿಗಳಾಗಿದ್ದಾರೆ.
ಇಂತಹಕಾರ್ಯದಿಂದ ನಾವು ಅಸಾಮಾನ್ಯರೆನಿಸುಕೊಳ್ಳುತ್ತೇವೆ. ಇದೇ ನಮ್ಮ ಗುರಿಯಾಗಬೇಕು. ಸರಕಾರದ ಯೋಜನೆಗಳನ್ನು ಜನ ಸಾಮಾನ್ಯರು ಪಡೆದುಕೊಳ್ಳಬೇಕು ಎಂದರು.

ಬಿ.ಎಂ.ಎಸ್ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ.ಕೆ. ಅವರು, ಭಾರತೀಯ ಮಜ್ದೂರ್ ಸಂಘ ಕಾರ್ಮಿಕರ ಸೌಲಭ್ಯಗಳನ್ನು ಸುಲಭವಾಗಿ ತೆಗೆಸಿಕೊಡಲು ನೆರವಾಗುತ್ತಿದೆ. ರಾಷ್ಟ್ರದ ಉನ್ನತಿಯ ಕಾರ್ಯದಲ್ಲಿ ಕಾರ್ಮಿರನ್ನು‌ ಜೋಡಿಸುತ್ತಿದೆ. ಬಿ.ಎಂ.ಎಸ್ ನ ಸ್ಥಾಪಕರಾದ ದತ್ತೋಪಂತ ಥೇಂಗಡಿಜೀ ಅವರ ಕನಸನ್ನು ಸಾಕಾರ ಮಾಡಲು ಕಾರ್ಮಿಕರ ಸಹಕಾರ ಅಗತ್ಯ ಎಂದು ಹೇಳಿದರು.

ಬಿ.ಎಂ.ಎಸ್ ನ ತಾಲೂಕು ಸಮಿತಿ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ಕಾರ್ಮಿಕರಿಗಿರುವ ಸೌಲಭ್ಯಗಳು ಹಾಗೂ ಜೀವನ‌ ಭೀಮಾ ಹಾಗೂ ಸುರಕ್ಷಾ ಇನ್ಸೂರೆನ್ಸ್ ಯೋಜನೆಗಳು‌ ಹಾಗೂ ಪ್ರಧಾನ ‌ಮಂತ್ರಿ ಶ್ರಮ ಯೋಗಿಕ್ ಪಿಂಚಣಿ ಯೋಜನೆಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಳಿಯ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ‌ನ ಅಧ್ಯಕ್ಷ ವಸಂತ ಮಜಲು, ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಕಾರ್ಯಕ್ರಮ ಸಂಯೋಜಕ, ಕಳಿಯ ಗ್ರಾ.ಪಂ. ಮಾಜಿ ಸದಸ್ಯ ದಿವಾಕರ್ ಉಪಸ್ಥಿತರಿದ್ದರು

ಸಹಕಾರಿ ಭಾರತಿ ಕಾರ್ಯದರ್ಶಿ
ರಾಜೇಶ್ ಪೆಂರ್ಬುಡ ಸ್ವಾಗತಿಸಿ, ನಿರೂಪಿಸಿ, ದಿವಾಕರ್ ಮೆದಿನ ವಂದಿಸಿದರು.

error: Content is protected !!