ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗೀ ಆಸ್ಪತ್ರೆಗೆ ಅ.21ರಂದು ದಾಖಲಾಗಿದ್ದು, ಅ.22ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಧ್ರುವ ಸರ್ಜಾ ಮಗುವನ್ನು ಹಿಡಿದುಕೊಂಡಿರುವ ಫೋಟೋ ಹಾಗೂ ಚಿರಂಜೀವಿ ಸರ್ಜಾಫೋಟೋ ಮುಂದೆ ಮಗುವನ್ನು ಹಿಡಿದುಕೊಂಡಿರುವ ಫೋಟೋ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವಿವಾಹವಾಗಿದ್ದರು. 2018ರ ಏ. 29ರಂದು ಕೋರಮಂಗಲದ ಸೇಂಟ್ ಆಂಥೋನೀಸ್ ಫೈರಿ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ, ಮೇ. 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಆದರೆ ಚಿರಂಜೀವಿ ಸರ್ಜಾ 2020ರ ಜೂನ್ ನಲ್ಲಿ ನಿಧನ ಹೊಂದಿದ್ದರು.
ಸಧ್ಯ ಚಿರಂಜೀವಿ ಸರ್ಜಾ ಅವರಿಗೆ ಗಂಡು ಮಗು ಹುಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.