ಹುಟ್ಟುತ್ತಲೇ ಸುದ್ದಿ‌ ಮಾಡಿದ ‘ಚಿರು’ ಸುಪುತ್ರ


ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ಮಗುವಿನ‌ ಪೋಟೋ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಹುಟ್ಟುತ್ತಲೇ ಸಖತ್ ಸುದ್ದಿಯಾಗುತ್ತಿವೆ ಚಿರು ಪುತ್ರನ ಚಟುವಟಿಕೆಗಳು.
ಚಿರಂಜೀವಿ ಸರ್ಜಾ ಅವರ ಸ್ನೇಹಿತ ವರ್ಗ, ಚಿತ್ರರಂಗದ ಗಣ್ಯರು ಮಗುವಿಗೆ ವಿಶೇಷ ರೀತಿಯಲ್ಲಿ ಶುಭಹಾರೈಸುತ್ತಿದ್ದಾರೆ.
ಚಿರು ಮಗನ ಫೋಟೋ ಹಾಕಿ‌ ನಟ, ನಿರೂಪಕ ಸೃಜನ್ ಲೋಕೇಶ್ ಅವರು ವೆಲ್ ಕಂ ಗೆಳೆಯ ಎಂದು‌ ಶುಭ ಹಾರೈಸಿದ್ದಾರೆ.
ಚಿರಂಜೀವಿ ಸರ್ಜಾ ದ್ರುವ ಸರ್ಜಾ‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ತಾಯಿ ಮಗು ಕ್ಷೇಮವಾಗಿದ್ದಾರೆ, ಮಗು ಹುಟ್ಟಿದ್ದು ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಣ್ಣನ ಮಗುವಿಗಾಗಿ ದ್ರುವ ಸರ್ಜಾ ಇತ್ತೀಚೆಗೆ 10 ಲಕ್ಷ ರೂ.‌ ಮೌಲ್ಯದ ತೊಟ್ಟಿಲು ಖರೀದಿಸಿದ್ದು, ಸುದ್ದಿಯಾಗಿತ್ತು.

error: Content is protected !!