ಸೂಪರ್ ಮ್ಯಾನ್ ಎಂದು ಭಾವಿಸಿದ್ದೇನೆ- ಡೊನಲ್ಡ್ ಟ್ರಂಪ್


ವಾಷಿಂಗ್ಟನ್​: ದೇಶಾದ್ಯಂತ 2,16,000 ಅಮೆರಿಕನ್ನರ ಪ್ರಾಣ ಕಿತ್ತುಕೊಂಡ ಕೊರೊನಾ ವೈರಸ್​ಗೆ ತಾವು ತುತ್ತಾಗಿ ಪ್ರಾಯೋಗಿಕ ಕೋವಿಡ್​-19ಕ್ಕೆ ಚಿಕಿತ್ಸೆ ಪಡೆದು ಗುಣಮುಖವಾದ ನಂತರ ‘ಸೂಪರ್‌ಮ್ಯಾನ್’ನಂತೆ ಅನುಭವವಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಅಕ್ಟೋಬರ್ 1ರಂದು ಟ್ರಂಪ್​ಗೆ ಕೋವಿಡ್​-19 ಸೊಂಕು ಇರುವುದು ಪರೀಕ್ಷೆ ಬಳಿಕ ದೃಢಪಟ್ಟಿತ್ತು. ಮೂರು ರಾತ್ರಿ ಹಾಗೂ ನಾಲ್ಕು ದಿನಗಳ ಕಾಲ ಮಿಲಿಟರಿ ಆಸ್ಪತ್ರೆಗೆ ದಾಖಲಾಗಿ, ಪ್ರಾಯೋಗಿಕ ಪ್ರತಿಕಾಯ ಔಷಧ ಕಾಕ್ಟೈಲ್‌ ಚಿಕಿತ್ಸೆ ಪಡೆದ ನಂತರ ಸ್ವತಃ ಗುಣಮುಖರಾದರು ಎಂದು ಘೋಷಿಸಿಕೊಂಡರು.ಚುನಾವಣಾ ಸಮಾವೇಶ ನಡೆಸಲು ಶ್ವೇತಭವನದ ವೈದ್ಯರು ಈಗ ಅವರನ್ನು ಚಿಕಿತ್ಸೆಯಿಂದ ವಿಮುಕ್ತಗೊಳಿಸಿದ್ದಾರೆ. ಸೋಂಕಿಗೆ ಒಳಗಾದ ಬಳಿಕ ತಮ್ಮ ಎರಡನೇ ಸಮಾವೇಶದಲ್ಲಿ ಪೆನ್ಸಿಲ್ವೇನಿಯಾದ ಜಾನ್‌ಸ್ಟೌನ್‌ನಲ್ಲಿನ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗೆ ತೆರಳಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್​, ‘ಚಿಕಿತ್ಸೆಯ ನಂತರ ನಾನು ‘ಸೂಪರ್‌ಮ್ಯಾನ್’ ಎಂಬಂತೆ ಭಾವಿಸಿದ್ದೇನೆ ಎಂದು ಹೇಳಿದರು.ನನಗೆ ತಿಳಿದಿರುವಂತೆ ನಾನು ಏನನ್ನಾದರೂ ತೆಗೆದುಕೊಂಡಿದ್ದೇನೆ, ಅದು ಏನೇ ಆಗಿರಲಿ, ನಾನು ಬೇಗನೆ ಒಳ್ಳೆಯದನ್ನು ಕಂಡುಕೊಂಡಿದ್ದೇನೆ. ಅದು ಏನು ಅಂತ ಗೊತ್ತಿಲ್ಲ. ಪ್ರತಿಕಾಯಗಳು ಎಂಬುದು ನನಗೆ ತಿಳಿದಿಲ್ಲ. ನಾನು ಸೂಪರ್‌ಮ್ಯಾನ್‌ನಂತೆ ಭಾವಿಸಿದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.ನಾನು ನಾಲ್ಕು ಅಥವಾ ಐದು ದಿನಗಳ ಹಿಂದೆ ಇಲ್ಲಿಗೆ ಬರಬಹುದಿತ್ತು. ಈಗ ಕಾಳ ಕೂಡಿ ಬಂದಿದೆ. ನಮ್ಮಲ್ಲಿ ಉತ್ತಮ ವೈದ್ಯರಿದ್ದಾರೆ. ವಾಲ್ಟರ್ ರೀಡ್, ಜಾನ್ಸ್ ಹಾಪ್ಕಿನ್ಸ್ ಮತ್ತು ಉತ್ತಮ ವೈದ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಇದೇ ವೇಳೆ ಟ್ರಂಪ್ ಹೇಳಿದರು.

error: Content is protected !!