ಬೆಳ್ತಂಗಡಿ: ಬಿರುವೆರ್ ಕುಡ್ಲ (ರಿ)ಬೆಳ್ತಂಗಡಿ ಘಟಕದ ಬ್ರಹ್ಮಶ್ರೀ ಸೇವಾ ನಿಧಿಯಿಂದ ಮಡಂತ್ಯಾರು ನಿವಾಸಿಯಾದ ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮಗುವಿನ ಚಿಕಿತ್ಸೆಗೆ ಅರ್ಥಿಕ ನೆರವು ನೀಡಲಾಯಿತು.
ರವಿಶಂಕರ್ ಪೂಜಾರಿ ಪೂರ್ಣಿಮಾ ದಂಪತಿಗಳ ಮೂರುವರೆ ವರ್ಷದ ಮುಗ್ಧ ಮಗಳಾದ ಆರಾಧ್ಯಳು ಮಾತನಾಡಲಾಗದ ಹಾಗೂ ಕಿವಿ ಕೇಳಿಸದ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರಿನ ಮಾನಸ ಇಎನ್ ಟಿ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದರೆ ಆರಾಧ್ಯಳು ಎಲ್ಲರಂತೆ ಮಾತನಾಡಲು ಹಾಗೂ ಶ್ರವಣ ದೋಷದಿಂದ ಹೊರಬರುವ ಎಲ್ಲ ಸೂಚನೆಗಳಿವೆ ಎಂದು ಹಾಗೂ ಈ ಚಿಕಿತ್ಸೆಗೆ ಸುಮಾರು 14 ಲಕ್ಷ ಹಣದ ಅಗತ್ಯವಿದೆ ತಿಳಿಸಿದ್ದಾರೆ.
ರವಿ ಪೂಜಾರಿಯವರು ಮಂಗಳೂರಿನ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಅರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಇವರು ಈಗಾಗಲೇ ಕೆಲವೊಂದು ಥೆರಫಿ ಚಿಕಿತ್ಸೆ ಯನ್ನು ನೀಡುತ್ತಿದ್ದು ದೊಡ್ಡ ಮೊತ್ತದ ಚಿಕಿತ್ಸಾವೆಚ್ಚ ಭರಿಸುವುದು ಅವರಿಗೆ ಕಷ್ಟದ ಕೆಲಸ.
ಇವರ ಸಮಸ್ಯೆಗೆ ಸ್ಪಂದಿಸಿ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಹಾಗೂ ಧಾನಿಗಳ ಸಹಕಾರದಿಂದ ರವಿ ಪೂಜಾರಿಯವರಿಗೆ ತನ್ನ 25 ನೇ ತುರ್ತು ಸೇವಾ ಯೋಜನೆ ಯಾಗಿ 40,ಸಾವಿರರೂ ಚೆಕ್ ನೀಡಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಪಧಾನ ಕಾರ್ಯದರ್ಶಿ ಅರುಣ್ ಕುಮಾರ್, ಕೋಶಾಧಿಕಾರಿ ಹರ್ಷ ಕೋಟ್ಯಾನ್, ಬೆಳ್ತಂಗಡಿ ವಲಯ ಸಂಚಾಲಕರಾದ ಸುರೇಂದ್ರ ಕೋಟ್ಯಾನ್, ಮಧುಕರ್ ಪುಂಜಾಲಕಟ್ಟೆ,ಸುಧೀರ್ ಪೆರ್ಲ,ಸ್ನೇಕ್ ಅಶೋಕ್ ,ವಿಜಿತ್ ಪೂಜಾರಿ ಮುಂಡಾಜೆ,ವಿಶ್ವನಾಥ್ ಬುಡೆಂಗೊಟ್ಟು,ಸುಜೀತ್ ಮಾಲಾಡಿ,ಪ್ರಶಾಂತ್ ದಾನ,ಪುಷ್ಪರಾಜ್ ಪುರಿಯ,ಹರಿಪ್ರಸಾದ್ ಪುರಿಯ,ರಾಜ್ ಕೋಟ್ಯಾನ್ ಮದ್ದಡ್ಕ,ಲಕ್ಷಣ್ ಮೆಸ್ಕಾಂ ಮಡಂತ್ಯಾರ್ ,ಸುನೀಲ್ ಉಪಸ್ಥಿತರಿದ್ದರು.