ತಾಲೂಕಿನ ಅಭಿವೃದ್ಧಿ ಯೇ ನನ್ನ ಸಂಕಲ್ಪ :ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ತಾಲೂಕಿನ 241 ಬೂತುಗಳ ರಸ್ತೆ ಅಭಿವೃದ್ಧಿಗೆ ತಲಾ 10 ಲಕ್ಷದಂತೆ ಅನುದಾನ ಒದಗಿಸಲಾಗಿದೆ. ರಾಜ್ಯದಲ್ಲೇ ಪ್ರಥಮ ಪ್ರಯತ್ನವಾಗಿ ಅತೀ ಹೆಚ್ಚು ಅನುದಾನ ತರುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ತಾಲೂಕಿನ ಕುಕ್ಕಳ, ಪಾರೆಂಕಿ, ಮಚ್ಚಿನ, ಮಾಲಾಡಿ, ಸೋಣಂದೂರು, ಕುವೆಟ್ಟು, ಓಡಿಲ್ನಾಳ ಗ್ರಾಮಗಳ ಒಟ್ಟು 6.78 ಕೋಟಿ ರೂ. ವೆಚ್ಚದಲ್ಲಿ ಸೆ.16ರಂದು ವಿವಿಧ ರಸ್ತೆ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ 600 ಕೋಟಿ ಅನುದಾನ ಒದಗಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಭಾಜಪ ಪಕ್ಷವನ್ನು ಜನಸಾಮಾನ್ಯರು ಅಧಿಕಾರಕ್ಕೆ ತರುವ ನಿರೀಕ್ಷೆ ಇದ್ದು, ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು.
60 ಲಕ್ಷ ರೂ. ಅನುದಾನದಲ್ಲಿ ಕುಕ್ಕಳ ಗ್ರಾಮ, 1.3 ಕೋ. ರೂ. ಅನುದಾನದಲ್ಲಿ ಪಾರೆಂಕಿ ಗ್ರಾಮ,
3.32 ಲಕ್ಷ ರೂ. ಅನುದಾನದಲ್ಲಿ ಮಚ್ಚಿನ ಗ್ರಾಮ, 85ಲಕ್ಷ ರೂ. ಅನುದಾನದಲ್ಲಿ ಮಾಲಾಡಿ ಗ್ರಾಮ,
20 ಲಕ್ಷ ರೂ. ಅನುದಾನದಲ್ಲಿ ಸೋಣಂದೂರು ಗ್ರಾಮ, ಕುವೆಟ್ಟು- ಓಡಿಲ್ನಾಳ 1.55 ಕೋ.ರೂ. ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ನೆರವೆರಿಸಿದರು.

error: Content is protected !!