ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಗರಂ ಆದ ವಸಂತ ಬಂಗೇರ

 

ಬೆಳ್ತಂಗಡಿ: ತಾಲೂಕು ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಸರಿಯಾಗಿ ಮಾಡುತ್ತಿಲ್ಲ  ಅದಲ್ಲದೆ ಆಸ್ಪತ್ರೆಯಲ್ಲಿರುವ 6 ಮೆಷಿನ್ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಶೀಲಿಸಿತು.ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಆಗುತ್ತಿದೆ ಡಯಾಲೀಸಿಸ್ ಮಾಡುತ್ತಿರುವ 6 ಯಂತ್ರಗಳೂ ಹಾಳಾಗಿವೆ ಎಂಬ ದೂರನ್ನು ಆಧಾರಿಸಿ ಆಸ್ಪತ್ರೆಗೆ ಭೇಟಿ ಇತ್ತ ಕಾಂಗ್ರೆಸ್ ನಿಯೋಗ ಹೋಗಿ ಪರಿಶೀಲಿಸಿದರು ನಂತರ ಡಯಲೀಸಿಸ್ ಕೇಂದ್ರದ ಸಿಬ್ಬಂದಿಯೊಬ್ಬರು ಬರುವಂತಹ ರೋಗಿಗಳಲ್ಲಿ ಅತಿರೇಕವಾಗಿ  ವರ್ತಿಸುತ್ತಿದ್ದಾರೆ.ಮದ್ದು ಸರಿಯಾಗಿ ನೀಡುತ್ತಿಲ್ಲ ಕೆಲವು ಮದ್ದುಗಳನ್ನು ಬೇರೆಡೆಯಿಂದ ತರಲು ಹೇಳುತ್ತಾರೆ  ಎಂಬ ಆರೋಪದಡಿಯಲ್ಲಿ ಅವರನ್ನು   ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವಸಂತ ಬಂಗೇರ  ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ಅಸ್ಪತ್ರೆಗೆ ಭೇಟಿ ನೀಡಿ ಇಲ್ಲಿ ಬರುವ ಬಡ ರೋಗಿಗಳಿಗೆ  ಆಗುತ್ತಿರುವ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.ಅದಲ್ಲದೆ ಯಾರಿಗಾದರೂ ಇಲ್ಲಿ ತೊಂದರೆಯಾದಲ್ಲಿ ತಕ್ಷಣ ನನ್ನನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು ಆಸ್ಪತ್ರೆಯಲ್ಲಿ ಮದ್ದು ದಾಸ್ತಾನು ಇಡಲು ಪ್ರೀಡ್ಜ್ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ವ್ಯವಸ್ಥೆ ಇಲ್ಲದನ್ನು ಸಾರ್ವಜನಿಕರು ತಿಳಿಸಿದಾಗ ತಕ್ಷಣ ಡಿಎಚ್ಒ ಅವರಿಗೆ ಪೋನ್ ಮಾಡಿ ವಿವರ ಪಡೆದರು ಈಗಾಗಲೇ ಪ್ರೀಡ್ಜ್ ತಗೊಳ್ಳಲು ತಿಳಿಸುದ್ದೇವೆ ಎಂದಾಗ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಇದಕ್ಕೂ ಶಾಸಕರ ಅನುಮತಿ ಬೇಕೆ ಎಂದರು ಇನ್ನೆರಡು ದಿನದಲ್ಲಿ ಪ್ರೀಡ್ಜ್ ತರಬೇಕು ಅದಲ್ಲದೆ  ತಕ್ಷಣ ಅಂಬುಲೆನ್ಸ್ ವ್ಯವಸ್ಥೆಯನ್ನೂ  ಮಾಡಬೇಕೆಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಂಜನ್ ಜಿ.ಗೌಡ, ಮನೋಹರ್ ಇಳಂತಿಲ,ಜಿ.ಪಂ ಸದಸ್ಯರುಗಳಾದ ಶೇಖರ್ ಕುಕ್ಕೇಡಿ, ನಮಿತ ಪೂಜಾರಿ, ಅಭಿನಂದನ್ ಹರೀಶ್ ಕುಮಾರ್ ಅನಿಲ್ ಪೈ ಉಪಸ್ಥಿತರಿದ್ದರು.
ಡಯಾಲೀಸಿಸ್ ಮಾಡುವ 5 ಮೆಷಿನ್ ಗಳು  ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಡಯಾಲೀಸಿಸ್ ಗೆ ಬರುವವರಿಗೆ ಯಾವುದೇ ತೊಂದರೆ ಆಗಿಲ್ಲ ಒಂದು ಮೆಷಿನ್  ಕಳೆದ ಒಂದು ತಿಂಗಳಿನಿಂದ ತಾಂತ್ರಿಕ ಕಾರಣಗಳಿಂದ  ತೊಂದರೆಯಲ್ಲಿತ್ತು   ಅದೂ ಕೂಡ ಈಗಾಗಲೇ ಸರಿಯಾಗಿದ್ದು ಎಲ್ಲಾ ಮೆಷಿನ್  ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ರೋಗಿಗಳಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ ಮಾಜಿ ಶಾಸಕರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 

error: Content is protected !!